17.8 C
Munich
Saturday, August 23, 2025

ಮುಷ್ತಾಕ್ ಕತೆಗಳಲ್ಲಿ ಮಹಿಳೆಯರ ನೋವು ಸಂಕಟಗಳ ಚಿತ್ರಣ

Must read

ಬೆಳಗಾವಿ: ಜಗತ್ತಿಗೆ ಕನ್ನಡದ ಸಾಹಿತ್ಯ ಸತ್ವದ ರುಚಿ ಹಚ್ಚಿಸಿದ ಬಾನುಮಷ್ತಾಕ್ ಮತ್ತು ದೀಪಾ ಬಾಸ್ಥೆ ಅವರಿಗೆ ಈ ರೀತಿ ಕಾರ್ಯಕ್ರಮ ಆಯೋಜಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ .ಇವರ ಕತೆಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬದುಕಿನಲ್ಲಿ ಧಾರ್ಮಿಕ ರಾಜಕೀಯ ಸಾಮಾಜಿಕ ವಾಗಿ ನಡೆಯುವ ಶೋಷಣೆ ಗಳ, ನೋವು ಸಂಕಟಗಳ ಚಿತ್ರಣಗಳಷ್ಟೇ ಇಲ್ಲ ಅದರಾಚೆಗೆ ಮುಂದೇನು ಎಂಬ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟಗಳು ಇವೆ.

ಆರಂಭದಲ್ಲಿ ೮೦ ರ ದಶಕದ ಲಂಕೇಶ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳಿಂದ ಈ ತನಕದ ಹೆಣ್ಣು ಹದ್ದಿನ ಸ್ವಯಂವರ ಸಂಕಲನದ ತನಕ ಓದಿದಾಗ ಇವರ ಕಥಾ ಪಯಣದ ಲ್ಲಿ ಈ ಹುಡುಕಾಟಗಳ ದಿಕ್ಕು ಕಾಣುತ್ತದೆ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ನೀಡಿದ ಜೂರಿಗಳು ಮೆಚ್ಚುಗೆ ಸೂಚಿಸುತ್ತ ಹೇಳಿದ ಮಾತು ಗಳೂ ಗಮನಾರ್ಹ beautifull busy life affirming stories ಎಂದಿದ್ದಾರೆ ಎಷ್ಟೆಲ್ಲ ನೋವು ಸಂಕಟಗಳಾಚೆಯೂ ಬದುಕನ್ನು ಕುರಿತಾದ ಲೇಖಕಿಯ ಇತ್ಯಾತ್ಮಕ ದೃಷ್ಟಿಕೋನ ಇವರ ಕಥೆಗಳ ಶಕ್ತಿ ಯಾಗಿದೆ ಎಂದು ಸಮಾಜ ಶಾಸ್ತ್ರಜ್ಞೆ ಡಾ. ರಂಜನಾ ಗೋಧಿ ನುಡಿದರು.

ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಘಟಕ ದಿ. ೨೮/೫/೨೫ ರಂದು ಆಯೋಜಿಸಿದ್ದ ಹಸೀನಾ ಸಿನಿಮಾ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಗಾವಿಯ ಶಿವಬಸವ ನಗರದಲ್ಲಿರುವ ಡಾ ಮಾಳಿಯವರ ಹೋಂ ಥಿಯೇಟರ್ನಲ್ಲಿ ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮಷ್ತಾಕ್ ಅವರ ‘ಕರಿ ನಾಗರಗಳು’ ಕತೆಯ ಆಧಾರಿತ ಗಿರೀಶ ಕಾಸರವಳ್ಳಿ ನಿರ್ದೇಶನದ ಹಸೀನಾ ಸಿನಿಮಾ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೇಷ್ಠ ಅಭಿನಯದಿಂದ ಕನ್ನಡದ ತಾರೆ ತಾರಾ ೨೦೦೪ ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಹಸೀನಾ ಸಿನಿಮಾ ಇಂದಿಗೂ ಪ್ರಸ್ತುತ ವಾಗಿದೆ .ಹಸೀನಾಳ ನೋವು ಕೇವಲ ಮುಸ್ಲಿಂ ಸಮುದಾಯದ ಹೆಣ್ಣಿನ ನೋವು ಸಂಕಟಗಳಾಗಿ ಉಳಿಯುವುದಿಲ್ಲ ಅದು ಜಗತ್ತಿನ ಯಾವುದೇ ಮೂಲೆಯಲ್ಲಿನ ಗಂಡಾಳ್ವಿಕೆಯಲ್ಲಿ ಸಂಕಟಪಡುತ್ತಿರುವ ಹೆಣ್ಣು ಮಕ್ಕಳ ನೋವು ಅಸಹಾಯಕತೆಗಳಾಗಿದೆ ಈ ಕತೆಯ ಯಶಸ್ಸು ಹಸೀನಾಳ ಪ್ರತಿರೋಧದಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಘಟಕದ ಕಲೇಸಂ ಅಧ್ಯಕ್ಷರಾದ ಡಾ ಕೆ ಆರ್ ಸಿದ್ದಗಂಗಮ್ಮ, ದೀಪಿಕಾ ಚಾಟೆ, ಸುನಂದಾ ಹಾಲಬಾವಿ, ವಿಜಯಾ ದೇವನಗಾವಿ, ಉಷಾ ಸಂಕಪಾಲ, ವಿಮಲಾ ಜೈನಾಜ್, ಹೇಮಾ ಬರಬರಿ, ಶಶಿ ಮಾಳಿ, ಶ್ರೀಮತಿ ಭಿಕ್ಕೋಜಿ, ಸುಮಿತ್ರ ಚೋಬಾರಿ, ನೀಲಂ ಗುತ್ತಿಗೊಳಿ, ಜ್ಯೋತಿ ಬಾದಾಮಿ, ಸುಧಾ ಪಾಟೀಲ್ ಮುಂತಾದವರು ಸಂವಾದ ದಲ್ಲಿ ಪಾಲ್ಗೊಂಡಿದ್ದರು.

ರಾಜನಂದಾ ಗಾರ್ಗಿಯವರು ಸ್ವಾಗತಿಸಿದರು ನಿರ್ಮಲಾ ಬಟ್ಟಲ ವಂದನಾರ್ಪಣೆ ಸಲ್ಲಿಸಿದರು.

Follow Times of Karnataka For More…

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article