ರೂವಾರಿ
ಕಡಲ ತೀರದ
ಸ್ನೇಹ ಪ್ರೀತಿಯ
ಶಾಂತಿ ಸಮತೆಯ
ವಾರಸುದಾರ
ಬೆಲ್ಲ ಹಂಚಿ
ಸಿಹಿ ಉಣಿಸುವ
ಜೀವ ಸೆಲೆಯ
ಹೂಗಾರ
ಒಲವಿಗೆ ಬದುಕಿಗೆ
ಆಸರೆ ನೆರಳು
ನೀಡುವ ದಿಟ್ಟ
ಸರದಾರ
ವಾಪಿ ಕನ್ನಡ
ಸಂಘದ ರೂವಾರಿ
ಭಕ್ತಿ ಭಾವದ
ಪ್ರೇಮ ಪೂಜಾರಿ
ನಮ್ಮ ಹೆಮ್ಮೆಯ
ಪಿ ಎಸ್ ಕಾರಂತರು
ಏಳು ದಶಕದ ಮರ
ಏಳು ಶತಕದ ನೆರಳು
ಕನ್ನಡ ಕಟ್ಟುವ
ಗುರಿಕಾರ
ನಿಮ್ಮಯ ಕೊರಳಿಗೆ
ಹೂಹಾರ
ಗುಜರಾತಿನ ವಾಪಿ ಕನ್ನಡ ಸಂಘ ಪುನರುಜ್ಜೀವನಕ್ಕೆ ಕಾರಣೀಭೂತರು ತಮ್ಮ ೭೭ ವಸಂತ ತುಂಬಿದ ಪಯಣ ಮುಂದುವರೆಸಿದ ಸರಳ ಸಜ್ಜನಿಕೆಯ ಸ್ನೇಹಪರ ಜೀವಿ ಸಾಂಸ್ಕೃತಿಕ ಆರಾಧಕ ಪಿ ಎಸ್ ಕಾರಂತರು
______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ