Homeಕವನಕವನ : ಭಗತಗೆ ಗಲ್ಲು

ಕವನ : ಭಗತಗೆ ಗಲ್ಲು

Published on

ಭಗತಗೆ ಗಲ್ಲು

ಅಂದು ಕತ್ತಲು ಹರಿದಿರಲಿಲ್ಲ.
ಮಧ್ಯ ರಾತ್ರಿ ಗುಸು ಗುಸು ಮಾತು
ಸೆರೆವಾಸದ ಮನೆ ಸ್ಮಶಾನ
ಕೆಂಪು ಮೋತಿಯವರಿಗೂ ದುಗುಡ
ಒಳಗೊಳಗೆ ಕಳವಳ ಭಾರತೀಯರು
ಮುಖದ ಮೇಲೆ ಚಿಗುರು ಗಡ್ಡಮೀಸೆ
ಹಸೆ ಮಣಿ ಏರಿರಲಿಲ್ಲ.ಕಂಕಣ ಕಟ್ಟಿಲ್ಲ
ಬೇಡಲಿಲ್ಲ ಜೀವ ಭಿಕ್ಷೆ .ಪ್ರಾಣ ದಯೆ

ಬರೆದು ಮುಗಿಸಿದ ದಿನಚರಿ
ಸಾವಿನ ಅಧಿಕಾರಿಯ ಕೈಕುಲುಕಿದ                                   ಮುಗುಳು ನಗೆ ಮಂದಹಾಸ ನೋಟ              .ಬಾಡಿರಲಿಲ್ಲ ಮುಖದ ಚೇತನ

ನಡೆದರು ಸಾವಿನ ಕುಣಿಕೆಗೆ ಸಂತಸದಿ
ಭಗತ್ ಸುಖದೇವ ರಾಜಗುರು.
ಅಪ್ಪಿದರು ಕೊಲ್ಲುವ ಚಾಂಡಾಲನ
ಮನಸಿನಲಿ ಸ್ವರಾಜ್ಯ ಕಾಣದ ಕೊರಗು
ಸಂಕೋಲೆ ಕಳಚಲಿಲ್ಲ .ಇನ್ಕಿಲಾಬ ಘೋಷಣೆ
ಭಾರತ ಮಾತೆಗೆ ಕೊನೆಯ ವಂದನೆ ಹೇಳಿ
ಅಪ್ಪಿ ಮುದ್ದಾಡಿದರು ವೀರ ಮಕ್ಕಳು
ಕೊಟ್ಟರು ಕುಣಿಕೆಗೆ ಎಳೆಯ ಗೋಣು

ರಕ್ತ ಚಿಮ್ಮಿತು ನೆಲ ಕೆಂಪಾಯಿತು.
ನೋಡು ನೋಡುತ್ತಲೆ ಅಮರರಾದರು
ಭಗತ್ ಸುಖದೇವ ರಾಜಗುರು.
ಕದ್ದು ಮುಚ್ಚಿ ಶವ ಸಂಸ್ಕಾರ

ಹೆತ್ತ ಕರುಳಿಗೂ ತೋರಿಸದೆ ಸುಟ್ಟರು.
ಆರಿಲ್ಲ ಭಗತ್ ಹಚ್ಚಿದ ಕ್ರಾಂತಿಯ ಜ್ವಾಲೆ
ಮರೆತಿಲ್ಲ ಭಗತನ ಹೋರಾಟ
ಹುಟ್ಟಿ ಬರುವರು ಮತ್ತೆ ನೂರು ಭಗತ್
ದೇಶ ಕಟ್ಟಲು, ವೈರಿಯ ಮೆಟ್ಟಲು
ಭಗತ್ ಸುಖದೇವ ರಾಜಗುರು ಅಮರ ರಹೇ
ಇನ್ಕಿಲಾಬ ಜಿಂದಾಬಾದ
———————————————–
ಡಾ. ಶಶಿಕಾಂತ .ಪಟ್ಟಣ -ಪೂನಾ

Latest articles

More like this