ಸುಳ್ಳಿನ ಸಂಭ್ರಮ
ಸಾವಿರ ದಿನಗಳ
ಸುಳ್ಳಿನ ಸಂಭ್ರಮ
ಬಡವರ ತೆರಿಗೆಯಲಿ
ಸರಕಾರಿ ಉತ್ಸವ
ಬರಿದೋ ಬರಿದು
ತುತ್ತಿನ ಚೀಲ
ಮುಚ್ಚಲಾಗದ ಇಲಿ
ಹೆಗ್ಗಣಗಳ ಬಿಲ
ನೂರು ನಿತ್ಯ ಹಗರಣ
ಭೋವಿ ನಿಗಮ
ವಾಲ್ಮೀಕಿ ಸುಗಮ
ಸಾವಿರು ಕೋಟಿ ಸೋರಿದೆ
ಹೆಂಡ ಮದ್ಯದ
ಮಂತ್ರಿ ಖಾತೆ
ಆಹಾರ ಸಚಿವನ
ಭರ್ಜರಿ ಲಂಚ
ಲೂಟಿ ದರೋಡೆ
ನಿಂತಿಲ್ಲ ಕೊಂಚ
ಕಂದಾಯ ಹೆಚ್ಚಿದೆ
ಖಾಸಗಿ ಜೇಬಿಗೆ
ಸಹಕಾರ ಸಂಸ್ಥೆಯ
ಲೂಟಿ ಹೊಡೆದರು
ಗ್ಯಾರೆಂಟಿ ಕೊಟ್ಟು
ತಲೆ ಬೋಳಿಸಿ ಬಿಟ್ಟರು
ಎಲ್ಲರೂ ಕಳ್ಳರು
ಎಲ್ಲರೂ ಸುಳ್ಳರು
ಎಲ್ಲರೂ ಭ್ರಷ್ಟರು
ಖಾದಿ ರಕ್ಕಸರು
ಬುದ್ಧ ಬಸವರ
ತತ್ವವ ಕೊಂದು
ಸಾವಿರ ದಿನಗಳ
ಸುಳ್ಳಿನ ಸಂಭ್ರಮ
ಮಲಗಿದ ಮತದಾರ
ಎಂಟು ದಶಕದ ನಿದ್ದೆ
ಏಳಬೇಕಿದೆ ನಮ್ಮಯ ಜನರು
ಕೂಗ ಬೇಕಿದೆ ಧಿಕ್ಕಾರ
______________________
ಸದಾಶಿವ ಪಾಟೀಲ, ಮುದ್ದೇಬಿಹಾಳ