ನಿಜದಾನಂದ
ಅಗೋ ನೋಡಲ್ಲಿ
ಬಾನ್ ನೀಲಿಯ ಬಣ್ಣಾ
ಹೊಸ ಕನಸಿನ ರಂಗೋಲಿಯ
ಚಿತ್ತಾರದ ಹೊಳಪಣ್ಣಾಮಿನು ಮಿನುಗುವ ತಾರೆ
ನಿಜ ಆಲಾಪದ ಸಂಗೀತ
ತೆರೆದಿಟ್ಟಿದೆ ಹೂ ಒಡಲಿಗೆ
ಗಮ ಗಮಸುತ್ತಿದೆ ಬಾರೆಕೈಗೆಟುಕದ ಆಗಸಕೆ
ಪದ ಕಾವ್ಯದ ಏಣಿ
ಹತ್ತು ಬಾ ಕವಿ ಮಣಿ
ಕನಸಿನಲಿ ನೀ ತೇಲಿನವಿರಾದ ಗಿರಿ ಪಂಕ್ತಿಗೆ
ತೆರೆದಿಟ್ಟಿದೆ ಸಾಲು
ಬೆಳಗುತ್ತಿದೆ ಭವ್ಯ ಭಾರತದಲಿ
ಸಾಲಿನಲಿ ನೀ ನಿಲ್ಲುಇಳೆವಯಸ್ಸಿನ ಹೊಸ ಗಾಳಿ
ಸುಧೆ ತುಂಬಿದೆ ರಂಗೇರಿ
ಕಾರ್ಮೋಡದಲಿ ಮಸುಕಾಗಿದೆ
ಸವಿ ಮನವು ಬಾಯಾರಿಮಧುಪಾನದಿ
ಉಮ್ಮೆದ್ದಿದೆ
ದೂರದ ರಸಾನಂದ
ನಿಜ ಭಕುತಿ ಭಾವದಲಿ
ಮಿಂದೆದ್ದಿದೆ
ನಿಜದಾನಂದಡಾ ಸಾವಿತ್ರಿ ಕಮಲಾಪೂರ