ಕಂದಗಲ್ಲ. (ತಾ ಇಲಕಲ್ಲ ) ಸಮೀಪದ ನವಲಿ ಗ್ರಾಮದ ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಶರಣ ಶ್ರೀ ಶಂಕರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪುಷ್ಪ ಆರ್ಚನೆ ಯೊಂದಿಗೆ ಗ್ರಂಥ ಲೋಕಾರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಹುರಕಡ್ಲಿ ಪ್ರಕಾಶನ ಭಾಗ್ಯನಗರ ಕೊಪ್ಪಳದ ವೀರಣ್ಣ ಹುರಕಡ್ಲಿ ಅವರು ರಚಿಸಿದ ಬಣಗಾರ ಸಿಂಪಿ ಸಮಾಜದ ಕುಲಗುರು ಶರಣ ಶಂಕರ ದಾಸಿಮಯ್ಯನವರ ಚರಿತ್ರೆಯ ಕೃತಿ ಲೋಕಾರ್ಪಣೆಯ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಡಾ. ರಾಜಶೇಖರ ಜಮದಂಡಿಯವರು ಉದ್ಘಾಟಿಸಿ ಮಾತನಾಡಿ ಸುಕ್ಷೇತ್ರ ನವಲಿ ಶ್ರೀ ಜಡೆಶಂಕರಲಿಂಗ ದೇವಸ್ಥಾನ, ಶರಣ ಶ್ರೀ ಶಂಕರ ದಾಸಿಮಯ್ಯನವರ ಗ್ರಂಥ ಹಾಗೂ ಅವರ ಆಧ್ಯಾತ್ಮಿಕ ಚಿಂತನೆ ಬಗ್ಗೆ ತಿಳಿಸುತ್ತಾ ಶರಣ ಶಂಕರ ದಾಸಿಮಯ್ಯನವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊoಡು ಉತ್ತಮ ಜೀವನ ನಡೆಸಬೇಕು.ಸಾಹಿತಿ ವೀರಣ್ಣ ಹುರಕಡ್ಲಿ ಕೊಪ್ಪಳ ಇವರ ಕೊಡುಗೆ ಸಮಾಜಕ್ಕೆ ಅಮೂಲ್ಯವಾದದ್ದು ಇವರ ಸಾಹಿತ್ಯ ಆಧ್ಯಾತ್ಮಿಕ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.
ಗ್ರಂಥ ಲೇಖಕ, ಆಧ್ಯಾತ್ಮಿಕ ಚಿಂತಕ, ಸಮಾಜ ಸೇವಕ, ಸಾಹಿತಿ ವೀರಣ್ಣ ಹುರಕಡ್ಲಿ ಗೌರವಾಧ್ಯಕ್ಷರು ಬಣಗಾರ ಸಮಾಜ ಕೊಪ್ಪಳ ಮಾತನಾಡಿ, ಬಣಗಾರ ಸಿಂಪಿ ಸಮಾಜದ ಪ್ರತಿಯೊಂದು ಮನೆಯಲ್ಲೂ ಶರಣ ಶ್ರೀ ಶಂಕರ ದಾಸಿಮಯ್ಯ ನವರ ಗ್ರಂಥ ಇರಬೇಕೆಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡರು.
ಅಧ್ಯಕ್ಷತೆಯನ್ನು ಬೆಂಗಳೂರು ಬಣಗಾರ ಸಿಂಪಿ ಸಮಾಜದ ಅಧ್ಯಕ್ಷರಾದ ಚನ್ನಪ್ಪ ಹರಸೂರ ಮಸ್ಕಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರಣ್ಣ ಬಣಗಾರ. ಅಧ್ಯಕ್ಷರು ಬಣಗಾರ ಸಿಂಪಿ ಸಮಾಜ ಕೊಪ್ಪಳ. ಶರಣಬಸವ ಅಧ್ಯಕ್ಷರು ಬಣಗಾರ ಸಿಂಪಿ ಸಮಾಜ ರಾಯಚೂರು. ಸುರೇಶ ಹರಸುರ. ಅಧ್ಯಕ್ಷರು ಬಣಗಾರ ಸಿಂಪಿ ಸಮಾಜ ಮಸ್ಕಿ ವಿಜಯಕುಮಾರ ಬಣಗಾರ. ಉಪಾಧ್ಯಕ್ಷರು ಬಣಗಾರ ಸಿಂಪಿ ಸಮಾಜ ಯಾದಗಿರಿ,ಸಂಗೀತ ಮಜ್ಜಿಗಿ, ಉಪಾಧ್ಯಕ್ಷರು ಸ್ಕೌಟ್ಸ್ ಅಂಡ್ ಗೈಡ್ಸ್ ಲಿಂಗಸೂರ, ಸುರೇಶ್ ನಾಗಲಿಕರ್ ಉಪಾಧ್ಯಕ್ಷರು ಚಿಂಪಿಗ ಸಮಾಜ ಬಳ್ಳಾರಿ, ವೀರೇಶ ಚನ್ನಪ್ಪ ಸಿಂಪಿ ಪತ್ರಕರ್ತರು ಅಧ್ಯಕ್ಷರು ಮೂಲ ಶ್ರೀ ಜಡೆ ಶಂಕರಲಿಂಗೇಶ್ವರ ದೇವಸ್ಥಾನ ಕಂದಗಲ್. ಅಕ್ಕಮಹಾದೇವಿ ನಾಗಲಿಕರ, ವಸಂತಕುಮಾರ ಬಣಗಾರ,ಅಧ್ಯಕ್ಷರು ಬಣಗಾರ ಫೌಂಡೇಶನ್ ಸುರಪುರ,ಎಲ್ ಜಿ ಶಿವಕುಮಾರ,ದೊಡ್ಡಪ್ಪ ಬುಳ್ಳ,ಗೌರವಾಧ್ಯಕ್ಷರು ಸಿಂಪಿ ಸಮಾಜ ಮಸ್ಕಿ.ಗಂಗಣ್ಣ ಎರಗೊಳ ಆಗಮಿಸಿದ್ದರು.
ಇದೆ ಸಂದರ್ಭದಲ್ಲಿ ಸಾಧಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸತ್ಕರಿಸಲಾಯಿತು.
ದಾಸೋಹ ಸಂಘಟಕರಿಂದ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗವೀಶ ಅಳವಂಡಿ,ನಾಗರಾಜ ಬಣಗಾರ ರುಕ್ಮಾಪುರ, ಶೇಖರ ನಾಗಲಿಕರ, ಕಿರಣ ಕಂದಗಲ, ಆನಂದ ಬಾರಿಗಿಡ, ಸುರೇಶ ಮತ್ತು ದರ್ಶನ ಮಸ್ಕಿಇಲಕಲ್ಲ. ಪಂಚಾಕ್ಷರಿ ಹಿರೇಮಠ ಉಪಸ್ಥಿತರಿದ್ದರು. ನಿರೂಪಣೆ ರವಿಶಂಕರ ಕಂದಗಲ, ಪ್ರಾರ್ಥನೆ ಲತಾ ಹೂಗಾರ ಲಿಂಗಸೂಗೂರ, ಪ್ರಾಸ್ತಾವಿಕ ನುಡಿ ವಸಂತ ಕುಮಾರ್ ಬಣಗಾರ, ಸ್ವಾಗತ ಶ್ರೀಧರ್ ಮಸ್ಕಿ, ವಂದನಾರ್ಪಣೆ ಜಗದೀಶ ಸರಾಪ ಇಲಕಲ್ಲ ನೆರವೇರಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಿಂಪಿ ಬಣಗಾರ ಸಮಾಜದವರು, ನವಿಲೇ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.