ಮೂಡಲಗಿ – ತಾಲೂಕಿನ ಪಟಗುಂದಿಯಲ್ಲಿ ಪ್ರತಿ ವರ್ಷ ರಂಜಾನ್ ಹಬ್ಬವನ್ನು ಸುನ್ನಿ ಜಮಾತಿನ ಜನರು ತಮ್ಮ ಮಸೀದಿಯಲ್ಲಿ ಪ್ರಾಥನೆ ಮಾಡಿ ಖುಷಿಯಿಂದ ಹಬ್ಬವನ್ನು ಆಚರಿಸುತ್ತಿದ್ದರು ಆದರೆ ಈ ವರ್ಷ ಬೇಸರದಿಂದ ಆಚರಿಸುವಂತಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದರು
ಈ ವರ್ಷ ಬಿಟಿಟಿ ಕಮಿಟಿಯ ಸುನ್ನಿ ಜಮಾತಿನ ಜನರಿಗೆ ಮಸೀದಿಯಲ್ಲಿ ಪ್ರಾಥನೆ ಮಾಡಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಪ್ರಾರ್ಥನೆ ಸಲ್ಲಿಸಿ ಬೇಸರದಿಂದ ಹಬ್ಬವನ್ನು ಆಚರಿಸಲಾಗಿದೆ ಎಂದು ಬಿಟಿಟಿ ಕಮಿಟಿಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಬಿಟಿಟಿ ಕಮಿಟಿಗೆ ಅನಧಿಕೃತವಾಗಿ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಆ ಪದಾಧಿಕಾರಿಗಳು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಮಗೆ ಅವಕಾಶ ನೀಡಿಲಿಲ್ಲ ಈ ಹಿನ್ನೆಲೆ ಸುನ್ನಿ ಜಮಾತಿನ ಜನರ ಮನಸಿಗೆ ಬಹಳ ನೋವನ್ನುಂಟು ಮಾಡಿದೆ ಎಂದು ಹೇಳಿದರು.