ಸಿಂದಗಿ : ಒಳಮೀಸಲಾಶಿ ರೊಸ್ಟರ್ ಹ೦ಚಿಕೆ ವಿರೋಧಿಸಿ,
ಹಳೆಯ ನಿಯಮದ೦ತೆ ನೇಮಕಾತಿ ನಡೆಸಲು ಒತ್ತಾಯಿಸಿ ಬಂಜಾರ, ಭೋವಿ, ಕೊರಮ, ಕೊರಚ,ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿಗಳ ರಾಜ್ಯ ಮಹಾ ಒಕ್ಕೂಟ ದಿಂದ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾ. 24ರಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ
ನೇತೃತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಸಿಂದಗಿ ತಾಲೂಕಿನ ಬಂಜಾರ, ಭೋವಿ, ಕೊರಮ, ಕೊರಚ,
ಚರ್ಮಕಾರ ಜಾತಿಗಳ ಸಮುದಾಯದ ಜನರು ಸ್ವಯಂ
ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ಅ)
ರಾಜ್ಯ ಸಮಿತಿಯ ಮುಖಂಡ ಪಂಡಿತ ಯಂಪೂರೆ ಮನವಿ
ಮಾಡಿಕೊಂಡಿದ್ದಾರೆ.
ಒಳ ಮೀಸಲಾತಿ ಕುರಿತು ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದುಒಳ ಮೀಸಲಾತಿ ಕುರಿತು ನಾಗಮೋಹನ್ ದಾಸ್ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು ಇದನ್ನು ರಾಜ್ಯ ಸರ್ಕಾರ ಇದನ್ನು ತಿರಸ್ಕಾರ ಮಾಡಿ ಎಲ್ಲ ಸಮುದಾಯದ ಹಿತಾಸಕ್ತಿಗಾಗಿ
ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮಾಡುವ ಹೋರಾಟ ಆಗಿರುವುದರಿಂದ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.