ಬೀದರ – ಯದ್ಧದ ಪರಿಣಾಮದಿಂದಾಗಿ ಬೀದರನಲ್ಲಿ ಗ್ಯಾಸ್ ಅಭಾವ ಮುಂದುವರೆದಿದ್ದು ಸುಡು ಬಿಸಿಲು ಲೆಕ್ಕಿಸದೇ ನೂರಾರು ಜನರು ಗೃಹ ಬಳಕೆ ಗ್ಯಾಸ್ ಗಾಗಿ ಮುಗಿಬಿದ್ದಿದ್ದಾರೆ.
ಗ್ಯಾಸ್ ಎಜೆನ್ಸಿ ಕೇಂದ್ರದ ಮುಂದೆ ನೂರಾರು ಜನ ಸಾಲುಗಟ್ಟಿ ನಿಂತಿದ್ದು ವಿಶೇಷಚೇತನ ವ್ಯಕ್ತಿಯೊಬ್ಬರೂ ಸರದಿ ಸಾಲಿನಲ್ಲಿ ಕಂಡುಬಂದರು.
ಅನಿಲ ಗ್ರಾಹಕರ ನಿಯಂತ್ರಣಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.ಈ ಮಧ್ಯೆ ಎಸ್ಸೆಎಲ್ ಸಿ ಮಕ್ಕಳನ್ನು ಖಾಲಿ ಹೊಟ್ಟೆಯಲ್ಲಿ ಪರೀಕ್ಷೆಗೆ ಕಳಿಸುವ ಗತಿ ಬಂದಿದೆ ಹೀಗಾದರೆ ಜೀವನ ಹೇಗೆ ಎಂಬುದಾಗಿ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಇದೆಲ್ಲ ಇದ್ದರೂ ಜಿಲ್ಲಾ ಉಸ್ತುವಾರಿ ತಮಗೇನೂ ಸಂಬಂಧವೇ ಇಲ್ಲದಂತೆ ದಾವಣಗೆರೆ ಉಪ ಚುನಾವಣೆಯಲ್ಲಿ ಭಾಗವಹಿಸಿದ್ದು ತಮಗಾಗಿ ಸನ್ಮಾನ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಿಸಿದೆ.
ವರದಿ : ನಂದಕುಮಾರ ಕರಂಜೆ, ಬೀದರ