Homeಸುದ್ದಿಗಳುತೀವ್ರ ಮಳೆ ಕೊರತೆ ನೀಗಿಸಲು ಕೂಡಲೇ ಮೋಡ ಬಿತ್ತನೆಯ ಸಾಧ್ಯತೆಯ ಬಗ್ಗೆ ಸರ್ಕಾರ ಚಿಂತಿಸಲಿ: ಪ್ರಕಾಶ...

ತೀವ್ರ ಮಳೆ ಕೊರತೆ ನೀಗಿಸಲು ಕೂಡಲೇ ಮೋಡ ಬಿತ್ತನೆಯ ಸಾಧ್ಯತೆಯ ಬಗ್ಗೆ ಸರ್ಕಾರ ಚಿಂತಿಸಲಿ: ಪ್ರಕಾಶ ಕಾಳಶೆಟ್ಟಿ

Published on

ಮೂಡಲಗಿ –  ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ ನಿನೋ ಪರಿಣಾಮದಿಂದಾಗಿ ಮುಂಗಾರು ಮಳೆಯು ಸಂಪೂರ್ಣ ಕೈಕೊಟ್ಟಿದ್ದು, ಹಿಂಗಾರು ಮಳೆಯೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತೀವ್ರವಾದ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ನೀಗಿಸಲು ಸರ್ಕಾರ ಮೋಡಬಿತ್ತನೆಯ ಸಾಧ್ಯತೆಯ ಬಗ್ಗೆ ಗಮನಹರಿಸಬೇಕು ಎಂದು ಜೆಡಿಎಸ್ ಮುಖಂಡ ಪ್ರಕಾಶ ಕಾಳಶೆಟ್ಟಿ ಹೇಳಿದ್ದಾರೆ.

ರೈತರು ಬಿತ್ತಿದ ಬೆಳೆಗಳು ಮಳೆಯಿಲ್ಲದೆ ಕರಗಿಹೋಗುತ್ತಿದ್ದು, ಲಕ್ಷಾಂತರ ರೂ. ಬಂಡವಾಳ ಹೂಡಿದ ಅನ್ನದಾತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ. ಆಕಾಶದಲ್ಲಿ ಅಲ್ಲಲ್ಲಿ ಮೋಡಗಳು ಕವಿದಿದ್ದರೂ ಸಹ, ಮಳೆಯಾಗದೆ ಬರೀ ಮೋಡಗಳು ಮಾತ್ರ ಸರಿದು ಹೋಗುತ್ತಿವೆ. ಈ ನೈಸರ್ಗಿಕ ಪರಿಸ್ಥಿತಿಯನ್ನು ಮೆಟ್ಟಿನಿಲ್ಲಲು ಮತ್ತು ಲಭ್ಯವಿರುವ ಮೋಡಗಳನ್ನು ಸದ್ಬಳಕೆ ಮಾಡಿಕೊಳ್ಳಲು ವೈಜ್ಞಾನಿಕ ವಿಧಾನವಾದ ‘ಮೋಡ ಬಿತ್ತನೆ’ ಒಂದೇ ಸದ್ಯವಿರುವ ಪ್ರಮುಖ ದಾರಿಯಾಗಿದೆ.

ಈ ಹಿಂದೆ ರಾಜ್ಯದಲ್ಲಿ ಕೆಲ ಸಂದರ್ಭಗಳಲ್ಲಿ ಯಶಸ್ವಿಯಾಗಿ ಮೋಡ ಬಿತ್ತನೆ ಪ್ರಯೋಗಗಳನ್ನು ನಡೆಸಲಾಗಿದೆ. ಆದರೆ, ಪ್ರಸ್ತುತ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರವು ಮೋಡ ಬಿತ್ತನೆಯ ಬಗ್ಗೆ ಅಧ್ಯಯನ ನಡೆಸಿ ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರೈತ ಮುಖಂಡರು ಹಾಗೂ ಜೆಡಿಎಸ್ ಮೂಡಲಗಿ ತಾಲೂಕಿನ ಅಧ್ಯಕ್ಷರಾದ ಪ್ರಕಾಶ ಕಾಳಶೆಟ್ಟಿ ಅವರು ಒತ್ತಾಯಿಸಿದ್ದಾರೆ…

Latest articles

More like this