ರೈತರ ಭೇಟಿಯಾಗಲು ಬೆಳಗಾವಿಗೆ ಹೊರಟ ಮುಖ್ಯಮಂತ್ರಿ
ಬೆಂಗಳೂರು: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ ಎಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಬ್ಬು ಬೆಳೆಗಾರರನ್ನು ಭೇಟಿ ಮಾಡಲು ಬೆಳಗಾವಿಗೆ ತೆರಳುತ್ತಿರುವುದಾಗಿ ತಿಳಿಸಿದ್ದು ಆದರೂ ಇದು ರಾಷ್ಟ್ರಮಟ್ಟದ ಸಮಸ್ಯೆ ನಮ್ಮ ಕೈಯಲ್ಲಿ ಆದಷ್ಟು ಮಾಡಿದ್ದೇವೆ ಎಂದಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್,ರೈತರನ್ನು ಭೇಟಿಯಾಗಲು ಬೆಳಗಾವಿಗೆ ಹೋಗ್ತಾ ಇದ್ದೀನಿ. ಕಬ್ಬು ಬೆಳೆಗಾರರ ರೈತರ ಹತ್ರ ಮಾತಾಡಬೇಕು ಅಂತ. ಯಾಕಂದ್ರೆ ಅವರಿಗೆ ಪಾಪ ಬಹಳ ಶ್ರಮ, ದಣಿ ತಗೋಳ್ತಾ ಇದ್ದಾರೆ. ಅವರ ಪರಿಸ್ಥಿತಿ ನಮಗೆ ಅರ್ಥ ಆಗ್ತದೆ” ಎಂದು ಹೇಳಿದರು.
ಕಬ್ಬು ಬೆಳೆಗಾರರಿಗೆ ಬೇಕಾದಷ್ಟು ಸಮಸ್ಯೆಗಳಿವೆ. ಅಲ್ಲಿಗೆ ಹೋಗಿ ಅವರೊಂದಿಗೆ ಮಾತನಾಡಿ, ಅವರ ಸಮಸ್ಯೆ ಏನೆಂಬುದನ್ನು ತಿಳಿದುಕೊಂಡು, ನಮ್ಮಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಇದೇ ವೇಳೆ ಮೈಸೂರಿನಲ್ಲಿ ನಾಯಕರ ಭೇಟಿ ಹಾಗೂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, “ಬಿಟ್ಟು ಬಿಡಿ, ಬಿಟ್ಟು ಬಿಡಿ” ಎಂದು ಹೇಳಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರಿಸದೆ ತೆರಳಿದರು.