ಬಚ್ಚಿಟ್ಟ ಬಯಕೆ
ಎದೆಯ ಗೂಡಿನಲ್ಲಿ
ತುಂಬಿ ತುಳುಕುವ
ಬಚ್ಚಿಟ್ಟ ಬಯಕೆಗಳನು
ಬಿಚ್ಚಿಡುವ ಆತುರಮನದ ಆಲಯದಲ್ಲಿ
ಹುದುಗಿದ್ದ ಅದೆಷ್ಟೋ
ಆಕರ್ಷಣೆಗಳ ಸೆಳೆತಕೆ
ತೆರೆದುಕೊಳ್ಳುವ ಕಾತುರಮುಗಿಯದಷ್ಟು ಮಾತುಗಳು
ಮನದಾಳದಲ್ಲಿ ಮೊಳೆತಿವೆ
ಚಿಗುರೊಡೆವ ಬಯಕೆಗೆ
ಕನಸುಗಳು ಸಾವಿರಮಾತುಗಳು ಮೌನವಾಗಿ
ಮೌನದಲ್ಲೇ ಹರಿಸಿ ಹಾರೈಸಿ
ಸ್ಪಂದಿಸುವ ಜೀವಕ್ಕೆ
ನೆನಪುಗಳ ನಿರಾಳತೆ ಮಧುರಕಾಣದ ಕಡಲನು
ಸೇರುವ ಕಾತುರ
ಅಬ್ಬರದ ಅಳೆಗಳನ್ನು
ಅಪ್ಪಿಕೊಳ್ಳುವ ಅವಸರಆಕಾಶದ ನೀಲಿಗೆ
ಮೋಡಗಳ ತೋರಣ
ಇಳೆಗೆ ಮಳೆಯ ಸಿಂಚನ
ಸೇರಲು ಮಾನಸ ಸರೋವರ
__________________________
ಡಾ.ಗೀತಾ ದಾನಶೆಟ್ಟಿ
ಬಾಗಲಕೋಟೆ