Homeಲೇಖನಆಧುನಿಕ ವಚನಕಾರ್ತಿ ಲಿಂಗೈಕ್ಯ ಲಲ್ಲೇಶ್ವರಿ ಮೂಗಿ( ಲಿಗಾಡೆ)

ಆಧುನಿಕ ವಚನಕಾರ್ತಿ ಲಿಂಗೈಕ್ಯ ಲಲ್ಲೇಶ್ವರಿ ಮೂಗಿ( ಲಿಗಾಡೆ)

Published on

ಆಧುನಿಕ ವಚನ ಸಾಹಿತ್ಯವು 12ನೇ ಶತಮಾನದ ಶರಣರ ವಚನಗಳ ಪರಂಪರೆಯನ್ನು ಮುಂದುವರಿಸುತ್ತಾ, ಪ್ರಸ್ತುತ ಸಮಾಜದ ಸಮಸ್ಯೆಗಳು, ವೈಚಾರಿಕತೆ, ಪರಿಸರ ಕಾಳಜಿ ಮತ್ತು ಮಾನವೀಯ ಮೌಲ್ಯಗಳನ್ನು ವಚನ ಶೈಲಿಯಲ್ಲಿ (ಅಂಕಿತನಾಮದೊಂದಿಗೆ) ಅಭಿವ್ಯಕ್ತಿಸುವ ಸಾಹಿತ್ಯ ಪ್ರಕಾರವಾಗಿದೆ.

ಸಾಮಾಜಿಕ ಕಳಕಳಿ: ಇಂದಿನ ಭ್ರಷ್ಟಾಚಾರ, ಮೌಢ್ಯ, ಆರ್ಥಿಕ ಅಸಮಾನತೆ ಮತ್ತು ಯಾಂತ್ರಿಕ ಜೀವನದ ವಿಡಂಬನೆ ಈ ವಚನಗಳ ಮುಖ್ಯ ವಸ್ತು.

ವೈಚಾರಿಕತೆ: ಮನುಷ್ಯನ ಅಹಂಕಾರ, ಕಾಯಕನಿಷ್ಠೆ, ಮತ್ತು ಸಂಸ್ಕಾರದ ಕುರಿತಾದ ಆತ್ಮವಿಮರ್ಶೆಗೆ ಇಲ್ಲಿ ಒತ್ತು ನೀಡಲಾಗಿದೆ.

ಶೈಲಿ: 12ನೇ ಶತಮಾನದ ವಚನಗಳಂತೆಯೇ ಸರಳ ಭಾಷೆ, ಗದ್ಯ-ಪದ್ಯ ಮಿಶ್ರಿತ ಶೈಲಿ, ಮತ್ತು ಅಂಕಿತನಾಮದ ಬಳಕೆಯು ಕಂಡುಬರುತ್ತದೆ.

ಪ್ರೇರಣೆ: ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣರ ಆದರ್ಶಗಳನ್ನು ಇಂದಿನ ಸಂದರ್ಭಕ್ಕೆ ಅಳವಡಿಸಿಕೊಳ್ಳುವುದು ಇದರ ಉದ್ದೇಶ.

ಶರಣೆ ಲಿಂಗೈಕ್ಯ ಲಲ್ಲೇಶ್ವರಿ ಮೂಗಿ( ಲಿಗಾಡೆ) ಇವರು
-27/5/42 ಸೊಲ್ಲಾಪುರದ ಪ್ರತಿಷ್ಠಿತ ಲಿಗಾಡೆಯವರ ಮನೆತನದಲ್ಲಿ ಹುಟ್ಟಿದರು.ಶಿಕ್ಷಣ- 10ನೇ ತರಗತಿ ಮಾತ್ರಡಾ. ಶಂಕರಣ್ಣ.ಡಿ.ಮೂಗಿ .ಬೈಲಹೊಂಗಲ ಇವರ ಜೊತೆಗೆ ಮದುವೆಯಾದರು. ನಾಲ್ಕು ಜನ ಹೆಣ್ಣು ಮಕ್ಕಳು.ತಾಯಿ ಡಾಕ್ಟರ್ ಜಯದೇವಿ ತಾಯಿ, ತಂದೆ ಚನ್ನಮಲ್ಲಪ್ಪ ಲಿಗಾಡೆ.

ಸೊಲ್ಲಾಪುರದ ಆಗರ್ಭ ಶ್ರೀಮಂತರ ಮನೆಯಲಿ ಜನಿಸಿ, ಕಿತ್ತೂರಿನ ಬೈಲುಹೊಂಗಲದ ಮೂಗಿ ಮನೆತನದಲ್ಲಿ ಮದುವೆಯಾದರು..ಮಾವ ಕಿತ್ತೂರಿನ ಮೊದಲ ಇತಿಹಾಸಕಾರರೆಂದು ಹೆಸರುಗೊಂಡ ದೊಡ್ಡಬಾವೆಪ್ಪ.ಚ. ಮೂಗಿ ಅವರ ಸೊಸೆ.
ನಾಲ್ಕು ಹೆಣ್ಣು ಮಕ್ಕಳು
ಡಾ.ಚಾಮಲಾ. ಡಿ. ಚೌಗುಲೇ
ವಿರುಜಾ ಮಲ್ಲಿಕಾರ್ಜುನ
ಸವಿತಾ ದೇಶಮುಖ
ಚೇತನ ಪಾಟೀಲ

ಅವರು ಬರೆದ ಪುಸ್ತಕಗಳು-
“ವೀರ ದಾಸೋಹಿ” (ನಲತ್ವಾಡದ ವೀರೇಶ್ವರ ಶರಣರು)
ಮೂವತ್ತು ಶಿವಶರಣೆಯರು
ಬಸವ ಯೋಗದ ಶಿವಶರಣೆಯರು
ಹುತಾತ್ಮಮಲ್ಲಪ್ಪ ಧನಶಟ್ಟಿ ಸೊಲ್ಲಾಪುರ
ಸಂತಿಣಿ…. ಈ ಪುಸ್ತಕವನ್ನು ಮರಾಠಿಯ ಲೇಖಕ ಸಾಟಿ ಅವರು ಮರಾಠಿಯಲ್ಲಿ ಅನುವಾದಿಸಿದ್ದಾರೆ.
ಇತ್ತೀಚೆಗೆ ಅವರ ಕವನ ಸಂಕಲನವನ್ನು ತ್ರಿಪದಿ, ಚೌಪದಿ, ವಚನಗಳು ಒಳಗೊಂಡ “ಕರುಳಿನ ಕಗ್ಗ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಜಯದೇವಿ ತಾಯಿಯವರೊಂದಿಗೆ ನೆರಳಿನಂತೆ ಬಾಳಿದವರು. ಅವರು ಕೈಗೊಂಡ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಲಲ್ಲೇಶ್ವರಿತಾಯಿಯವರು ಹಿಂದೆ ಇರುತ್ತಿದ್ದರು. ಜಯದೇವಿ ತಾಯಿಯವರಿಗೆ ಅನಾರೋಗ್ಯವಿದ್ದಲಿ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ತಾಯಿಯವರ ಆಗುಹೋಗುಗಳ ಕಾಳಜಿಯವಹಿಸುತಾ‌ ಜಯದೇವಿ ತಾಯಿಯವರ ಕೊನೆಯ ದಿನಗಳನ್ನು ಅವರೊಂದಿಗೆ ಜೊತೆಗೂಡಿ ಬಸವಕಲ್ಯಾಣದಲ್ಲಿ ಭಕ್ತಿ ಭವನವನ್ನು ನಿರ್ವಹಿಸಿ ಪತಿ ಶಂಕರಣ್ಣ ಮೂಗಿ ಹಾಗೂ ಮಕ್ಕಳೊಂದಿಗೆ ಅಲ್ಲೇ ಪಾಸವಾದರೂ ಜಯದೇವಿ ತಾಯಿಯವರಿಗಾಗಿ ಸಿದ್ಧ ಶೈಲವನ್ನು ಸ್ಮಾರಕವನ್ನು ನಿರ್ಮಿಸಿ ಕಲ್ಯಾಣ ಭೂಮಿಯಲ್ಲಿಯೇ ಒಂದಾದರು .

ತಾಯಿಯವರ ಅಗಲುವಿಕೆಯಿಂದ ನೊಂದ
ಲಲ್ಲೇಶ್ವರಿ ಮೂಗಿ ಲಿಗಾಡೆಯವರು 30 ಜೂನ್ 1998 ರಂದು ಬಯಲಲ್ಲಿ ಬಯಲಾದರು. ಕನ್ನಡ ಸಾಹಿತ್ಯಕ್ಕೆ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದ ಲಿಂಗೈಕ್ಯ ಶರಣೆ ಲಲ್ಲೇಶ್ವರಿ ಮೂಗಿ (ಲಿಗಾಡೆಯವರು) ಬಯಲಲ್ಲಿ ಬಯಲಾದರು.
ಬಸವ ಕಲ್ಯಾಣದ ಭಕ್ತಿ ಭವನ ಸಿದ್ಧ ಶೈಲ ಇವರಿಲ್ಲದೆ ಬಿಕೋ ಎನ್ನುತ್ತಿವೆ.

ನಾಲ್ಕು ಹೆಣ್ಣು ಮಕ್ಕಳು ತಮ್ಮ ಅಜ್ಜಿಯ ಹೆಸರಿನಲ್ಲಿ ಪ್ರತಿ ವರ್ಷ ಡಾ ಜಯದೇವಿ ತಾಯಿ ಲಿಗಾಡೆ ಅವರ ಸ್ಮರಣೋತ್ಸವದ ಜೊತೆಗೆ ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಮಹಿಳಾ ಪುರಸ್ಕಾರವನ್ನು ನೀಡುತ್ತಾರೆ.
ಅನೇಕ ದತ್ತಿ ದಾಸೋಹಗಳನ್ನು ನೀಡಿದ್ದಾರೆ.
ಇವರ ಮೂರನೆಯ ಮಗಳು ಅಜ್ಜಿ ಜಯದೇವಿ ತಾಯಿ ಲಿಗಾಡೆ ಹಾಗೂ ತಾಯಿ ಲಲ್ಲೇಶ್ವರಿ ಮೂಗಿ ಅವರಂತೆ ಸೃಜನಶೀಲ ಸಾಹಿತಿ ಲೇಖಕಿಯಾಗಿದ್ದಾರೆ.
ಲಲ್ಲೇಶ್ವರಿ ಮೂಗಿ ಲಿಗಾಡೆಯವರ ದಿವ್ಯ ಚೇತನಕ್ಕೆ ಭಕ್ತಿ ಪೂರ್ವಕ ನಮನಗಳು.
_________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this