ನಾವು ನಮ್ಮವರು
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಹೇಳುವ ಹಾಗೆ ದಂಪತಿಗಳಿಬ್ಬರೂ
ಜೊತೆಗೂಡಿ ಬಸವತತ್ವ ಪ್ರಚಾರದ ಕೈಂಕರ್ಯವನ್ನು ಹಗಲಿರುಳೆನ್ನದೆ ನಡೆಸಿಕೊಂಡು ಬಂದಿರುವುದು ಅತ್ಯಂತ ಅಭಿಮಾನಪೂರ್ವಕ ವಿಷಯ. ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಲ್ಲಿ ಪತಿಗೆ ಹೆಗಲು ಕೊಟ್ಟು ಸದಾ ಕಾರ್ಯನಿರತರಾಗಿರುವ ಡಾ. ಜಯಶ್ರೀ ಪಟ್ಟಣ ಅವರನ್ನು ನಾವು – ನಮ್ಮವರು ಅಂಕಣದ ಮೂಲಕ ನಿಮಗೆಲ್ಲರಿಗೂ ಪರಿಚಯ ಮಾಡಿಕೊಡುತ್ತಿರುವುದು ನನಗೆ ಹೆಮ್ಮೆಯ ವಿಷಯ. ತಮ್ಮ ಅತ್ತೆಯವರಾದ ಲಿಂ. ಸರೋಜ ರುದ್ರಪ್ಪ ಪಟ್ಟಣ ಅವರ ಹೆಸರಿನಲ್ಲಿ ದತ್ತಿ -ದಾಸೋಹ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎನ್ನುವುದು ಸಹ ಸಂತೋಷದ ವಿಚಾರ.
ಡಾ.ಜಯಶ್ರೀ ಶಶಿಕಾಂತ ಪಟ್ಟಣ ಅವರು
ಮೂಲತಹ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪುಟ್ಟ ಗ್ರಾಮ ಅರಹಟ್ಟಿಯವರು. ಇದು ಇವರ ತಂದೆಯವರ ಊರು. ಡಾ.ಜಯಶ್ರೀ ಪಟ್ಟಣ ಅವರ ಮಾತೃ ಭಾಷೆ ಕನ್ನಡ.
ತಂದೆಯವರಾದ ಲಿಂ. ಶ್ರೀ ಶ್ರೀಶೈಲಪ್ಪ ಅಂಗಡಿ ಇವರ ಹಿರಿಯ ಮಗಳು. ತಂದೆಯವರು ಮಹಾರಾಷ್ಟ್ರ ವಿದ್ಯುತ್ ವಿತರಣಾ ನಿಗಮದಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿದ್ದರು. ಹೀಗಾಗಿ ಡಾ. ಜಯಶ್ರೀ ಅಂಗಡಿ ಇವರ ಜನನ ಮಹಾರಾಷ್ಟ್ರದ ನಾಸಿಕದಲ್ಲಿ ಆಯಿತು.
ಶಿಕ್ಷಣವೂ ಕೂಡ ನಾಸಿಕ ಮತ್ತು ಪುಣೆಯಲ್ಲಿ ಜರುಗಿತು.
ತಾಯಿ ಶ್ರೀಮತಿ ವಿಜಯಲಕ್ಷ್ಮಿ ಅಂಗಡಿ ಇವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಕಡಕೋಳ ಮನೆತನದವರು. ಇವರಿಗೆ ಬಾಲ್ಯದಿಂದಲೂ ತಾಯಿಯೇ ಮನೆಯಲ್ಲಿ ಕನ್ನಡ ಭಾಷೆಯನ್ನು ಕಲಿಸಿದ ಪ್ರಥಮ ಗುರು.
1994 ರಲ್ಲಿ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಇವರ ಜೊತೆಗೆ ಮದುವೆಯಾಗಿ ಬೆಳಗಾವಿಯಲ್ಲಿ ಹದಿನೈದು ವರ್ಷ, ಬೆಂಗಳೂರಿನಲ್ಲಿ ಎರಡು ವರ್ಷ ವಾಸವಾಗಿದ್ದು ಕನ್ನಡ ಕವಿಗಳ ವಿಶೇಷವಾಗಿ ಬೇಂದ್ರೆ,ಕುವೆಂಪು, ಬೆಟಗೇರಿ ಕೃಷ್ಣಶರ್ಮ, ಗೋಪಾಲ ಕೃಷ್ಣ ಅಡಿಗ ಮುಂತಾದವರ ಕವನ ಓದಿ ಪ್ರಭಾವಿತರಾದವರು.
ಇತ್ತೀಚೆಗೆ ದಲಿತ ಕವಿ ಡಾ. ಜಿ. ಎಸ್.ಸಿದ್ದಲಿಂಗಯ್ಯನವರ ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತೋರಣ ಎಂಬ ಕವನವನ್ನು ಮರಾಠಿಗೆ ತರ್ಜುಮೆ ಮಾಡಿದ್ದಾರೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರು ಕನ್ನಡದ ಪ್ರಬುದ್ಧ ಸಾಹಿತಿಯಾಗಿದ್ದಾರೆ. ಜಯಶ್ರೀ ಪಟ್ಟಣ ಅವರ ಕನ್ನಡ ಸಾಹಿತ್ಯ ಮರಾಠಿ ಸಾಹಿತ್ಯ ಕೃಷಿಯಲ್ಲಿ ಪತಿ ಶಶಿಕಾಂತ ಅವರ ಪಾತ್ರ ದೊಡ್ಡದು.
ಡಾ. ಜಯಶ್ರೀ ಪಟ್ಟಣ ಅವರು ಸೃಜನಶೀಲ ಸಾಹಿತಿ,ಲೇಖಕಿ, ವಾಗ್ಮಿ,ಕನ್ನಡ,ಮರಾಠಿ, ಸಾಹಿತ್ಯದ ಸ್ನೇಹ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪುಣೆಯ ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇದರ ಅಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.
ಜಯಶ್ರೀ ಶ್ರೀಶೈಲಪ್ಪ ಅಂಗಡಿ ಎಂಬ ಕನ್ನಡದ ಪೋರಿ ಮಹಾರಾಷ್ಟ್ರದ ನೆಲದಲ್ಲಿ ಹುಟ್ಟಿ ಬೆಳೆದು ಕನ್ನಡ ನಾಡು ನುಡಿ ಸಂಸ್ಕೃತಿಯ ನಿರಂತರ ಕಾರ್ಯ ಮಾಡಿದ್ದಾರೆ.
ನಾಲ್ಕನೆಯ ತರಗತಿಯಲ್ಲಿ ರಾಷ್ಟ್ರೀಯ ಸ್ಕಾಲರ್ಶಿಪ್ ಮೆರಿಟ್ ಪರೀಕ್ಷೆ ಪಾಸಾಗಿ ಅಣ್ಣಾ ಹಜಾರೆ ಅವರಿಂದ ರಾಷ್ಟ್ರೀಯ ಶಿಷ್ಯ ವೇತನ ಪಡೆದಿದ್ದಾರೆ. ಬಸವಾದಿ ಶರಣರ ವಚನ ಆಂದೋಲನಕ್ಕೆ ನಿತ್ಯ ಶ್ರಮಿಸುತ್ತಿರುವ ಪ್ರಾಮಾಣಿಕ ಪ್ರಬುದ್ಧ ಜೀವ.
ಇವರು ವೃತ್ತಿಯಲ್ಲಿ ಸೂಕ್ಷ್ಮ ಜೀವ ಶಾಸ್ತ್ರದಲ್ಲಿ ಸ್ನಾತಕ ಪದವಿ ಮತ್ತು ಪಿ.ಎಚ್. ಡಿ ಪಡೆದ ಶ್ರೇಷ್ಠ ವಿಜ್ಞಾನಿ. 48 ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಪ್ರಬಂಧಗಳನ್ನು ಪ್ರಕಟ ಮಾಡಿದ್ದಾರೆ.
ಎರಡು ರಾಷ್ಟ್ರೀಯ ಪೇಟೆಂಟ್ ಹೊಂದಿದ್ದಾರೆ.
ಅಂತಾರಾಷ್ಟ್ರೀಯ ಮೈಕ್ರೋಬಯಾಲಜಿ ಸಂಶೋಧನಾ ಸಂಸ್ಥೆಯ ಆಜೀವ ಸದಸ್ಯತ್ವವನ್ನು ಪಡೆದಿದ್ದಾರೆ
ಅಂತಾರಾಷ್ಟ್ರೀಯ ಮೈಕ್ರೋಬಯಾಲಜಿ ಮಾಸಿಕ ಪತ್ರಿಕೆಯ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
2004 ರ ಅಂತಾರಾಷ್ಟ್ರೀಯ ಮೈಕ್ರೋಬಯಾಲಜಿ ಸಮ್ಮೇಳನ ಚಂಡೀಗಢದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಹೊಸ ಬಗೆಯ ಫಂಗಸ್ ಸೋಂಕು ಕಂಡು ಹಿಡಿದ್ದಾರೆ.
ಬೆಳಗಾವಿಯ ಹೈ ಟೆಕ್ ಡೈಗ್ನೊಸ್ಟಿಕ್ ಸೆಂಟರ್ ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಹನ್ನೆರೆಡು ವರ್ಷ ಸೇವೆ
ನಾಲ್ಕು ವರ್ಷಗಳ ಕಾಲ ಕೆ. ಎಲ್.ಇ. ಸಂಸ್ಥೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಎರಡು ವರ್ಷ ಬೆಂಗಳೂರಿನಲ್ಲಿ ಪಿ. ಇ.ಎಸ್ ಕಾಲೇಜಿನಲ್ಲಿ ,
ಮುಂದೆ ಮಹಾರಾಷ್ಟ್ರದ ಲೋಣಿ ಕಾಲೇಜಿನಲ್ಲಿ ನಾಲ್ಕು ವರ್ಷ ಪ್ರಾಧ್ಯಾಪಕರಾಗಿ ಡಿ.ವೈ.ಪಾಟೀಲ್ ಕಾಲೇಜಿನಲ್ಲಿ
ನಾಲ್ಕು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ಮೂವತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಈಗ ಡಾ ಜಯಶ್ರೀ ಪಟ್ಟಣ ಅವರು ಸಂಪೂರ್ಣ ಜನಪರ ಕಾಳಜಿಯ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಒಬ್ಬ ಸಂಸ್ಕಾರವಂತ ಮಗ ಮುರುಗೇಂದ್ರ ( ಅಥರ್ವ) ಈಗ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ.
ಡಾ. ಜಯಶ್ರೀ ಪಟ್ಟಣ ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ಮಹಿಳಾ ಕಾರ್ಮಿಕರಿಗಾಗಿ ನಿರಂತರ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವ ಅಪ್ಪಟ ದೇಸಿ ಪ್ರಜ್ಞೆಯ ಭಾರತೀಯ ಮಹಿಳೆ.
ಇವರು ಎಂ. ಎಸ್. ಸಿ ಮೈಕ್ರೋಬಯಾಲಜಿ
ಪಿ. ಎಚ್.ಡಿ ಮೈಕ್ರೋಬಯಾಲಜಿ ಮತ್ತು ಜೈವಿಕ ತಂತ್ರಜ್ಞಾನವನ್ನು ಕಲಿತ ಅತ್ಯಂತ ಮೇಧಾವಿ ಮಹಿಳೆ ಎನ್ನಬಹುದು.ಮಾತೃ ಭಾಷೆ ಕನ್ನಡವಾಗಿರುವುದರಿಂದ
ಕನ್ನಡ, ಮರಾಠಿ ಎರಡೂ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ವಿದ್ಯಾರ್ಥಿಗಳ ಅಕ್ಕರೆಯ ಪ್ರಾಧ್ಯಾಪಕಿ. ಸಮಾಜದಲ್ಲಿ ಶಿಸ್ತಿನ ಸಂಘಟಕಿ. ಮಹಾರಾಷ್ಟ್ರ ಅಂಧ ಶೃದ್ಧಾ ನಿರ್ಮೂಲನ ಸಂಸ್ಥೆಯ ಸಕ್ರಿಯ ಸದಸ್ಯೆ. ವೈಜ್ಞಾನಿಕ ದೃಷ್ಟಿಕೋನ ಹೊಂದಿರುವ ವೈಚಾರಿಕ ಚಿಂತನೆಯ ಲೇಖಕಿ.
ಮನೆಯಲ್ಲಿ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಸಂಸಾರದ ಜೊತೆಗೆ ಸಮಾಜದ ಕಾರ್ಯ ನಿರ್ವಹಿಸಿದ ಅಪರೂಪದ ಮಹಿಳೆ.
ಅಖಿಲ ಭಾರತೀಯ ಮರಾಠಿಯ ಸಾಹಿತ್ಯ ಸಮ್ಮೇಳನದ ಹಿಂದಿನ ಅಧ್ಯಕ್ಷರಾದ ಡಾ ಶ್ರೀಪಾದ ಸಬನಿಸ್ ಅವರ ಜೊತೆಗೆ ಬಸವ ತತ್ವ ಚಿಂತನೆ ಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಅನೇಕ ಹಿರಿಯ ಶರಣ ಸಾಹಿತಿಗಳ ಜೊತೆಗೆ ಸಂಪರ್ಕ ಹೊಂದಿದ್ದು ಅವರಿಗೆ
ಬಸವ ಸಾಹಿತ್ಯವನ್ನು ನೀಡಿ ಅವರಲ್ಲಿ ಶರಣ ಸಿದ್ಧಾಂತಗಳ ನೆಲೆಯನ್ನು ಗಟ್ಟಿಗೊಳಿಸುತ್ತಿದ್ದಾರೆ.
ಕನ್ನಡದಲ್ಲಿ ಸಾಹಿತ್ಯ
1..ಮಹಾರಾಷ್ಟ್ರದ ಮಹಾ ಸಂತರು.
2..ಮಹಾಮಾನವ ವಿಜ್ಞಾನಿಗಳು 3. ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು
ಸಂಪಾದನೆ ; ನಮ್ಮ ಶರಣರು .
ಮರಾಠಿಯಲ್ಲಿ ಲಿಂಗಾಯತ ಮಹನೀಯ ವ್ಯಕ್ತಿ ಮರಾಠಿ (ಅಚ್ಚಿನಲ್ಲಿ )ಬಸವ ಪಥ ಮರಾಠಿ ದ್ವೈಮಾಸಿಕದಲ್ಲಿ ನಾಲ್ಕು ಮರಾಠಿ ಲೇಖನಗಳು ಪ್ರಕಟವಾಗಿವೆ.ದೈನಿಕ ತರುಣ ಭಾರತ ಮರಾಠಿ ಪತ್ರಿಕೆಯಲ್ಲಿ ಹಲವು ವೈಚಾರಿಕ ಲೇಖನಗಳು ಪ್ರಕಟಣೆಗೊಂಡಿವೆ.ದೈನಿಕ ಪುಡಾರಿಯಲ್ಲಿ ಮಹಾತ್ಮಾ ಬಸವೇಶ್ವರ ಲೇಖನ ಮುಕ್ತಿ ವಿಮರ್ಶೆ ರಾಷ್ಟ್ರೀಯ ಮರಾಠಿ ಮಾಸಿಕ ಪತ್ರಿಕೆಯಲ್ಲಿ ಮಹಾತ್ಮಾ ಬಸವೇಶ್ವರ ಅನಿ ಶರಾನಂಚ ವೈಜ್ಞಾನಿಕ ದೃಷ್ಟಿಕೋನವನ್ನು ಬರೆದಿದ್ದಾರೆ
ಪ್ರೊ. ಎಸ್ ಜಿ ಸಿದ್ಧರಾಮಯ್ಯ ಅವರ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆ ಬರಹವನ್ನು ಮರಾಠಿಗೆ ಅನುವಾದಿಸಿದ್ದಾರೆ
ಪ್ರತಿ ತಿಂಗಳು ಮೊದಲನೆಯ ಶನಿವಾರ ಬುದ್ಧ,ಬಸವ, ಬಾಬಾಸಾಹೇಬ ಅವರ ವಿಚಾರ ಧಾರೆಯ ಅಂತರ್ಜಾಲದ ಗೂಗಲ್ ಉಪನ್ಯಾಸಗಳನ್ನು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
*ಸಂಪಾದಕರು*
ಪ್ರೊ ಶಾರದಮ್ಮ ಪಾಟಿಲ ಅವರ ಅಭಿನಂದನಾ ಗ್ರಂಥ
ಅನುಭವ ಕಳಶ ಅಮೃತ ವರ್ಷ
ಡಾ ಸರಸ್ವತಿ ಪಾಟೀಲ ಅವರ
ಅಭಿನಂದನಾ ಗ್ರಂಥ
ಅನುಭವ ಸಿರಿ ಇವುಗಳಲ್ಲದೆ ಮಹಾರಾಷ್ಟ್ರದ ಸಾಹಿತಿಗಳನ್ನು ಸ್ವಾತಂತ್ರ್ಯ ಹೋರಾಟಗಾರರ, ಸಿದ್ಧಿ ಪುರುಷರ ಜೀವನ ಚರಿತ್ರೆ ಕನ್ನಡದಲ್ಲಿ ತರ್ಜುಮೆ ಮಾಡುತ್ತಿದ್ದಾರೆ.
ಬಸವ ಅಧ್ಯಯನ ವೇದಿಕೆ ಸಭೆಯಲ್ಲಿ ನೂರಾರು ಉಪನ್ಯಾಸಗಳನ್ನು ನೀಡಿ ಮಹಾರಾಷ್ಟ್ರದಲ್ಲಿ ಬಸವ ತತ್ವ ಪ್ರಸಾರ ಮಾಡುತ್ತಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ಸತ್ಕಾರ
ಬಸವ ಸೆಂಟರ್ ಸೋಲಾಪುರ ಇವರು ಕೊಡಮಾಡುವ ಬಸವ ತಿಳಿವಳಿಕೆ ಮತ್ತು ತತ್ವಗಳಿಗಾಗಿ ದುಡಿಯುವ *ಶರಣ ದಂಪತಿ* ಪ್ರಶಸ್ತಿಯನ್ನು ಡಾ ಜಯಶ್ರೀ ಡಾ.ಶಶಿಕಾಂತ ಪಟ್ಟಣ ದಂಪತಿಗಳಿಗೆ 12 ಮೇ 2024 ರಂದು ನೀಡಲಾಗಿದೆ. ಇದು ಬಸವತತ್ವದ ಬಗೆಗಿನ ಅವರಿಬ್ಬರ ನಿಷ್ಠೆ, ಕಾಳಜಿ, ಕಳಕಳಿಯನ್ನು ಎತ್ತಿ ತೋರಿಸುತ್ತದೆ.
Dr. Jayashri Angadi- Pattan
Marathi Published Articles
1.. Marathi newspaper, क्रांतिकारी महात्मा बसवेश्वर
2. महात्मा बसवेश्वर: क्रांतिकारी, समतावादी आद्यपुरुष, श्री विश्वेश्वर नागरी सहकारी पतसंस्था मर्यादित ,
3..रौप्य महोत्सव स्मरणिका 2024, 62-66
4.. वचन साहित्य व चिकित्सक वृत्ती , बसव पथ,वर्ष १5, अंक 1 , जुलै ऑगस्ट २०२४, 16-25, ISSN 2348-4276
5.. महात्मा बसवेश्वर आणि शरणांचा वैज्ञानिक दृष्टिकोन , मुक्ती विमर्श , अंक 13 , १6 January -१5 फेब्रुवारी 2025
6.. कर्नाटकचे गांधी मंजाप्पा हर्डेकर, बसव पथ, जुलै ऑक्टोबर 2025 , 7- 12, ISSN 2348-4276
7… वंद्य वचन पितामह डॉ. फ. गु. हळकट्टी , बसव पथ, वर्ष 16, अंक 4 ,January -February 2026, 42-48 , ISSN 2348-4276
8.. लोकगीतांमधील बसवण्णा ( Communicated)
9… पुण्यश्लोक अप्पासाहेब वारद- श्रीमंत उद्योगपती, सोलापूरचे शिल्पकार ( Communicated)
*English Articles*
1. Krantijyoti Savitribai Phule
2. Siridhanya -Secret of good health
ಡಾ. ಜಯಶ್ರೀ ಪಟ್ಟಣ ಅವರು ಒಬ್ಬ ಅಪ್ಪಟ ಬಸವ ಭಕ್ತೆ, ನಯ -ವಿನಯದ ಸಾಕಾರ ಮೂರ್ತಿ, ತುಂಬಿದ ಕೊಡ ತುಳುಕದು ಎನ್ನುವ ಹಾಗೆ ಸಮಚಿತ್ತದ ವ್ಯಕ್ತಿತ್ವ,ಭಾಷಾ ಶುದ್ಧತೆ, ಮಾನವೀಯತೆಯ ನಡೆ – ನುಡಿ, ಸಂಸ್ಕಾರವಂತ ಗೃಹಿಣಿಯ ಪಾತ್ರದಲ್ಲೂ ಸೈ ಎನಿಸಿಕೊಂಡ ನಾ ಕಂಡ ಅಪರೂಪದ ಮಹಿಳೆ ಎಂದು ಇನ್ನೊಮ್ಮೆ ಹೇಳಲು ಬಯಸುತ್ತೇನೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಪುಣೆ