Homeಸುದ್ದಿಗಳುಫೆ. ೨೮ ಮತ್ತು ಮಾ.೧ ರಂದು ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ

ಫೆ. ೨೮ ಮತ್ತು ಮಾ.೧ ರಂದು ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ

Published on

ಹುನಗುಂದ: ಪಟ್ಟಣದ ವಿಜಯ ಮಹಾಂತೇಶ ಪ್ರೌಢ ಶಾಲೆ ಹಾಗೂ ವಿ..ಮ (ಶ್ರೀ ಗು.ಮ.ಗು ಸ್ಮಾರಕ) ಬಾಲಕಿಯರ ಪ್ರೌಢ ಶಾಲೆಯ ೧೯೮೪-೮೫ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವತಿಯಿಂದ ಫೆ.೨೮ ಶನಿವಾರ ಸಾಯಂಕಾಲ ೪ ಗಂಟೆಗೆ ಮತ್ತು ಮಾ.೧ ರವಿವಾರ ರಂದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರೀಯ ಹೆದ್ದಾರಿ ೫೦ರ ಪಕ್ಕದಲ್ಲಿರುವ ಎಂ.ಆರ್ ಫ್ಯಾಮಿಲಿ ರೆಸ್ಟೋರೆಂಟನಲ್ಲಿ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ ಎಂದು ೧೯೮೪-೮೫ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂಗಣ್ಣ ಅವಾರಿ ಹೇಳಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೨೮ರಂದು ಸಾಯಂಕಾಲ ೪ ಗಂಟೆಗೆ ನಾಲ್ಕು ದಶಕಗಳ ಹಿಂದಿನ ಸ್ನೇಹಿತರ ಸಮ್ಮೀಲನ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.ಮಾ.೧ರಂದು ಬೆಳಗ್ಗೆ ೮-೩೦ ಗಂಟೆಗೆ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಫೋಟೋ ಪ್ರೊಗ್ರಾಮ್, ಬೆಳಗ್ಗೆ ೯ ಗಂಟೆಗೆ ಕಲಿಸಿದ ಗುರುಗಳನ್ನು ವಿ.ಮ ಪ್ರೌಢ ಶಾಲೆಯಿಂದ ರಾಷ್ಟ್ರೀಯ ಹೆದ್ದಾರಿ ೫೦ರ ಪಕ್ಕದಲ್ಲಿರುವ ಎಂ.ಆರ್ ಫ್ಯಾಮಿಲಿ ರೆಸ್ಟೋರೆಂಟನವರಗೆ ಸಾರೋಟದಲ್ಲಿ ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಗುವುದು. ಆ ವೇದಿಕೆಯಲ್ಲಿ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ೧೯೮೪-೮೫ ನೇ ಸಾಲಿನ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.

ಸಂಗಮೇಶ ಬಂಗಾರಿ ಮಾತನಾಡಿ ಗುರುವಂದನಾ ಮತ್ತು ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಚಿತ್ತರಗಿ ಸಂಸ್ಥಾನ ಮಠ ಹುನಗುಂದದ ಗುರು ಮಹಾಂತ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳುವರು, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಸಂಗಣ್ಣ ಎಂ ಅವಾರಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು, ನಿವೃತ್ತ ಮುಖ್ಯ ಗುರುಗಳಾದ ಎಂ. ಎನ್. ತೆನಹಳ್ಳಿ, ಎಸ್.ಎಸ್ ದರಗಾದ,ಎ.ಓ. ಬಿರಾದಾರ ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಗಮೇಶ ಬೆನಕನಡೋಣಿ, ಈರನಗೌಡ ಪಾಟೀಲ, ಸಂಗಣ್ಣ ತಪೇಲಿ, ಎಚ್.ಡಿ ಪಾಟೀಲ, ಮಹಾಂತೇಶ ಮುಕ್ಕನ್ನವರ, ಬಿ.ಜಿ.ಗೌಡರ, ಅರವಿಂದ ದಾದ್ಮಿ ಸೇರಿದಂತೆ ಅನೇಕರು ಇದ್ದರು.

Latest articles

More like this