Homeಸುದ್ದಿಗಳುಬನವಾಸಿ : ನಾಮದೇವ ಸಭಾಭವನ ಉದ್ಘಾಟನೆ

ಬನವಾಸಿ : ನಾಮದೇವ ಸಭಾಭವನ ಉದ್ಘಾಟನೆ

Published on

ಬನವಾಸಿ: ನಾಮದೇವ ಸಿಂಪಿ ಸಮಾಜ ಬಾಂಧವರು ಶ್ರದ್ಧೆ ಭಕ್ತಿಯಿಂದ ಜೀವನ ನಡೆಸುವಂತರಾಗಬೇಕೆಂದು ಪಂಡರಾಪುರದ ಶ್ರೀ ಗುರುತಾತ್ಯಾ ರಾಶಿನಕರ ಮಹಾರಾಜರು ಹೇಳಿದರು.

ಇಲ್ಲಿಯ ನಾಮದೇವ ಕಲ್ಯಾಣ ಮಂಟಪದ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಶುಕ್ರವಾರ ನಾಮದೇವ ಸಿಂಪಿ ಸಮಾಜದಿಂದ ಹಮ್ಮಿಕೊಂಡ ನಾಮದೇವ ಸಭಾಭವನ ಉದ್ಘಾಟಿಸಿ, ಬಳಿಕ ಶ್ರೀ ದೇವರ 41ನೇ ದಿಂಡಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಸಿಂಪಿ ಸಮಾಜ ಬಾಂಧವರೆಲ್ಲರು ನಾಮದೇವರನ್ನು ಸಂತ ಶಿರೋಮಣಿ ಅನ್ನುವ ಬದಲಾಗಿ ಭಕ್ತ ಶಿರೋಮಣಿ ಎಂಬ ನಾಮದಿಂದ ಕರೆಯಿರಿ. ಸಂತ ಜ್ಞಾನೇಶ್ವರರು ಮತ್ತು ಸಂತ ನಾಮದೇವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಂತ ನಾಮದೇವ ಅವರ ಧರ್ಮೋಪದೇಶ ಮತ್ತು ಕೀರ್ತನೆಗಳು ಸಮಾಜದ ಜನರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವಂತೆ ಮನವಿ ಮಾಡುತ್ತದೆ. ನಾಮದೇವ ಅವರ ಚಿಂತನೆಯು ಸಮಾಜದಲ್ಲಿ ವಿಶಾಲವಾದ ಪರಿಣಾಮ ಬೀರಿದೆ. ಸಿಂಪಿ ಸಮಾಜ ಬಾಂಧವರು ಪಂಢರಪುರದ ನಾಮದೇವ ಆಹಾರ ಪದ್ದತಿಯನ್ನು ರೂಪಿಸಿಕೊಂಡು ಸಂಪ್ರದಾಯ, ಆಚರಣೆಗಳನ್ನು ಕ್ರಮಬದ್ಧವಾಗಿ ನಡೆಸಿ, ಪ್ರತಿ ಏಕಾದಶಿಯನ್ನು ಪಾಲನೆ ಮಾಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಾಮದೇವ ಸಿಂಪಿ ಸಮಾಜದ ವತಿಯಿಂದ ಪಂಢರಪುರದ ಶ್ರೀ ಗುರುತಾತ್ಯಾ ರಾಶಿನಕರ ಮಹಾರಾಜ, ಪತ್ನಿ ಸ್ನೇಹ ರಾಶಿನಕರ, ಪುತ್ರ ಯಜ್ಞೇಶ ರಾಶಿನಕರ ಅವರನ್ನು ಗೌರವಿಸಲಾಯಿತು. ಸಾಗರದ ಬಿ. ಕೃಷಮೂರ್ತಿ ಬಾಂಬುರೆ, ಹರಪನಹಳ್ಳಿಯ ಜ್ಞಾನೇಶ್ವರ ಸ್ಪಟಿಕ, ಗುತ್ತಿಗೆದಾರ ಗುಣಶೇಖರ ಪಿಳ್ಳೈ, ಭಾವನ ಕೋ.ಅಪ್. ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷ ಆರ್.ಆರ್.ಲೋಖಂಡೆ, ಉಪಾಧ್ಯಕ್ಷ ಪ್ರಕಾಶ ಮುಳೆ ಇವರನ್ನು ಸನ್ಮಾನಿಸಿದರು.

ದಿಂಡಿ ಉತ್ಸವದ ನಿಮಿತ್ತ ವೇ.ಮೂ. ಶಶಿಧರ ತೋರಗಲ್ ಇವರ ನೇತೃತ್ವದಲ್ಲಿ ಶ್ರೀ ವಿಠ್ಠಲ ರುಖುಮಾಯಿ ದೇವರಿಗೆ ವಿಷೇಶ ಪೂಜೆ, ಅಭಿಷೇಕ, ಹರಪನಹಳ್ಳಿಯ ಜ್ಞಾನೇಶ್ವರ ಸ್ಪಟಿಕ ಅವರ ಸಾನಿಧ್ಯದಲ್ಲಿ ಜ್ಞಾನೇಶ್ವರಿ ಪಾರಾಯಣ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನೆರವೇರಿತು.

ಅಖಂಡ ಜಾಗರಣೆಯ ನಿಮಿತ್ತ ರಾತ್ರಿ ಗುರುವರ್ಯರಿಂದ ಕೀರ್ತನೆ, ಸಂತವಾಣಿ ಕಾರ್ಯಕ್ರಮ, ದುರ್ಗೇಶ ಹಳಿಯಾಳ ಸಂಗಡಿಗರಿಂದ ಭಜನೆ, ಬೆಂಗಳೂರಿನ ಕುಮಾರಿ. ಪ್ರೀಯಾ ಮಾಳವದೆ, ಕು. ಶ್ರೀಯಾ ಮಾಳವದೆ ಅವರಿಂದ ಕಥಕ್ ನೃತ್ಯ ಹಾಗೂ ತೇಜಸ್ವಿನಿ ಮಹಿಳಾ ಮಂಡಳದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ನಾಮದೇವ ಸಿಂಪಿ ಸಮಾಜದ ಗೌರವಾಧ್ಯಕ್ಷ ಮಧುಕೇಶ್ವರ ವಿ.ಚೌದರಿ, ಅಧ್ಯಕ್ಷ ಮಧುಕರ ಮಾಳವದೆ, ಉಪಾಧ್ಯಕ್ಷ ಕೃಷ್ಣಮೂರ್ತಿ ಮಾಳವದೆ, ಕೋಶಧ್ಯಕ್ಷ ಮೃತ್ಯುಂಜಯ ಚೌಧರಿ, ಕಾರ್ಯದರ್ಶಿ ರಾಮಕೃಷ್ಣ ಚೌಧರಿ, ಸದಸ್ಯರಾದ ಸುರೇಂದ್ರ ಬೊಂಗಾಳೆ, ವೆಂಕಟೇಶ ಚೌಧರಿ, ರಾಘವೇಂದ್ರ ಬೊಂಗಾಳೆ, ಕುಶ ಕೊಳೇಕರ, ವಿಶ್ವನಾಥ ಚೌಧರಿ, ಪ್ರಕಾಶ ಪೇಟಕರ, ನಾಗಭೂಷಣ ರಾಕುಂಡೆ, ತೇಜಸ್ವಿನಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಶ್ರೀ ಚೌಧರಿ, ಕಾರ್ಯದರ್ಶಿ ಅಶ್ವಿನಿ ಮಾಳವದೆ ಹಾಗೂ ನಾಮದೇವ ಸಿಂಪಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕೋಶಧ್ಯಕ್ಷ ಮೃತ್ಯುಂಜಯ ಚೌಧರಿ ನಿರೂಪಿಸಿದರು. ಅರ್ಚನಾ ಬೊಂಗಾಳೆ ಪ್ರಾರ್ಥಿಸಿದರು.
ಕಾರ್ಯದರ್ಶಿ ರಾಮಕೃಷ್ಣ ಚೌಧರಿ, ಸ್ವಾಗತಿಸಿದರು. ಛಾಯಗ್ರಾಹಕ ರವಿ ಕೊಳೇಕರ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಾಮದೇವ ಸಿಂಪಿ ಸಮಾಜದ 41ನೇ ದಿಂಡಿ ಉತ್ಸವದ ಪೋತಿಯನ್ನು ಹಾಗೂ ದಿಂಡಿ ಉತ್ಸವಕ್ಕಾಗಿ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಪಂಢರಪುರದ ಸಂತ ಶಿರೋಮಣಿ ಶ್ರೀ ಗುರುತಾತ್ಯ ರಾಶಿನಕರ ಮಹಾರಾಜರನ್ನು ಶ್ರೀ ಮಧುಕೇಶ್ವರ ದೇವಸ್ಥಾನದಿಂದ ನಾಮದೇವ ಕಲ್ಯಾಣ ಮಂಟಪದವರೆಗೆ ಬೆಳ್ಳಿಯ ರಥದಲ್ಲಿ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಸಮಾಜ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಜೈಕಾರ ಕೂಗುತ್ತ ತಾಳ, ಮೃದಂಗದೊಂದಿಗೆ ಮೆರವಣಿಗೆಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಹಾಡುತ್ತ ಮೆರವಣಿಗೆಗೆ ಮೆರಗು ತಂದರು. ರಸ್ತೆಯುದ್ದಕ್ಕೂ ನೆರೆದಿದ್ದ ಸಮಾಜ ಬಾಂಧವರು ಮಹಾರಾಜರಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ಮೆರವಣಿಗೆಯಲ್ಲಿ ನೂರಾರು ನಾಮದೇವ ಸಿಂಪಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Latest articles

More like this