ಸಿಂದಗಿ: ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ ಎಂದು ಶಾಂತ ಸಿರಿ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಲೋಕದ ಮೇರು ಗಣಿತ ಲೋಕದ ಭೀಷ್ಮ’ ಎಂದೇ ಖ್ಯಾತರಾದ ಎಚ್.ಟಿ. ಕುಲಕರ್ಣಿ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಕಾಯಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಬಡತನ ದೊಡ್ಡ ಪಾಠ ಕಲಿಸುತ್ತದೆ ವಿದ್ಯಾರ್ಥಿಗಳು ವಿಜ್ಞಾನ ವಿಷಯದಿಂದ ವೈಜ್ಞಾನಿಕ ಅನ್ವೇಷಣೆಯ ಪಡೆಯಲು ಛಲ ಇರಬೇಕು ಅದರೊಂದಿಗೆ ಉತ್ತಮ ಗುರಿ ಇರುವ ಮುಖಾಂತರ ದೇಶಕ್ಕೆ ಮಾದರಿ ವ್ಯಕ್ತಿಯಾಗಿ ಜಗತ್ತನ್ನು ಅರಿಯಲು ಶಿಕ್ಷಕರು ಪಾಲಕರು ಅವಕಾಶ ಒದಗಿಸಬೇಕು ಎಂದರು.
ಪಿ ಕೆ ಪಿ ಎಸ್ ಬ್ಯಾಂಕ ಮ್ಯಾನೇಜರ ಕಾಯಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಕಾರ್ಯದರ್ಶಿ ರವಿಸ್ವಾಮಿ ಹತ್ತರಕಿಹಾಳಮಠ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಒಲವು ಹೊಂದಿದಾಗ ಸಮಾಜದಲ್ಲಿ ಆದರ್ಶ ಶಿಕ್ಷಕ ವೈದ್ಯರಾಗಲು ಜ್ಞಾನ ಕೇಂದ್ರಿತ ಭವ್ಯ ಭವಿಷ್ಯ ನಿರ್ಮಿಸಲು ಸಾಧ್ಯವಿದೆ ಎಂದರು. ಉಪನ್ಯಾಸಕ ಪತ್ರಕರ್ತ ದುಂಡಪ್ಪ ಸಾತಿಹಾಳ ಮಾತನಾಡಿ ಭಾರತೀಯ ವಿಜ್ಞಾನ ದಿನದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ವಿಜ್ಞಾನವನ್ನು ಸಂಭ್ರಮಿಸಿ, ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇಷಣೆಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಅಗತ್ಯತೆಯಿದೆ ಆದ್ದರಿಂದ ಕಾಯಕ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತದೆ ಎಂದರು.
ವೇದಿಕೆ ಮೇಲೆ ಆಡಳಿತಾ ಅಧಿಕಾರಿ ಶ್ರೀಶೈಲ ಎಸ್ ಹಿರೇಮಠ .ಮುಖ್ಯ ಶಿಕ್ಷಕರಾದ ಶ್ರೀಮತಿ ವಿಜಯ ಶ್ರೀಶೈಲ ಮಠ, ಪರಶುರಾಮ ಜಮದಾರ ಇದ್ದರು.
ಶಿಕ್ಷಕಿ ರೇಷ್ಮಾ ಮುಲ್ಲಾ ನಿರೂಪಿಸಿದರು. ಮುಭಾಸಿರ್ ಸ್ವಾಗತಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.