ಮೂಡಲಗಿ: ಆಧುನಿಕ ಯುಗದ ಯುವಕರಲ್ಲಿ ಎಚ್ ಐ ವಿ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿಯ ಆಪ್ತಸಮಾಲೋಚಕರಾದ ಶ್ರೀಮತಿ ಲತಾ ನಾಯಕ್ ಅವರು ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿಯ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಹಾಗೂ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಎಚ್ಐವಿ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾದ ಡಾ. ಭಾರತಿ ಕೋಣಿ ಮುಖ್ಯ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿ ಹಾಗೂ ಎಂ ಎಂ ಸನದಿ ಜಿಲ್ಲಾ ಮೇಲ್ವಿಚಾರಕರು, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ ಇವರ ಅನುಪಸ್ಥಿತಿಯಲ್ಲಿ ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕರಾದ ಶ್ರೀಮತಿ ಲತಾ ನಾಯಕ್ ಅವರು ಎಚ್ಐವಿ ಮತ್ತು ಏಡ್ಸ್ ಕುರಿತು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ನೀಡುವಲ್ಲಿ ಹಲವಾರು ವಿಷಯಗಳನ್ನು ವಿವರವಾಗಿ ತಿಳಿಸಿದರು.
ಯುವ ಸಮುದಾಯವು ಆಧುನಿಕ ಜಗತ್ತಿನಲ್ಲಿ ಎಚ್ ಐ ವಿ ಮತ್ತು ಏಡ್ಸ್ ನಂತಹ ಹಲವಾರು ವಿಭಿನ್ನ ಮಾರಕ ರೋಗಗಳ ಕುರಿತು ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕು ಹಾಗೆಯೇ ತಮ್ಮ ಸುತ್ತಮುತ್ತಲಿನ ಇತರ ಜನರಿಗೂ ಸಹಿತ ಎಚ್ಚರಿಕೆಯಿಂದ ಇರಲು ತಿಳಿಸಬೇಕು ಎಂದು ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಮಹೇಶ ಕಂಬಾರ ರವರು ಅಧ್ಯಕ್ಷತೆ ಸ್ಥಾನವನ್ನು ವಹಿಸಿದ್ದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಸುರೇಶ್ ಮಡಿವಾಳ ಐಸಿಟಿಸಿ ಮೂಡಲಗಿ, ರೆಡ್ ರಿಬ್ಬನ್ ಕ್ಲಬ್ ಸಂಯೋಜಕರಾದ ಪ್ರೊ. ಬಿ. ಎಸ್. ಕೆಸರಗೊಪ್ಪ, ಐ ಕ್ಯೂ ಎ ಸಿ ಸಂಯೋಜಕರಾದ ಪ್ರೊ. ಚೇತನ್ ರಾಜ್ ಬಿ. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ರಾಜೇಂದ್ರಪ್ರಸಾದ ಆಸಂಗಿ ಹಾಗೂ ಪ್ರೊ. ಸರಸ್ವತಿ ರಬಕವಿ ಹಾಗೂ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಸುಜಾತ ಪುಡ್ಲಕಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “ಎಚ್ ಐ ವಿ ಮತ್ತು ಏಡ್ಸ್ ನಿಯಂತ್ರಿಸುವಲ್ಲಿ ಯುವಕರ ಪಾತ್ರ” ಎಂಬ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಎನ್ಎಸ್ಎಸ್ ಸ್ವಯಂ ಸೇವಕ/ಕಿಯರಾದ ಐಶ್ವರ್ಯ ಹಳಿಂಗಳಿ ಮತ್ತು ಸವಿತಾ ಪೂಜಾರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಂಕರಯ್ಯ ಬೆಡಸೂರಮಠ ಮತ್ತು ಸುಮತಿ ತುಕ್ಕಾನಟ್ಟಿ ಸ್ವಾಗತಿಸಿದರು ಹಾಗೂ ಬಸವರಾಜ್ ಪೂಜಾರಿ ವಂದಿಸಿದರು.