ಸವದತ್ತಿ : ದಿ. 28/02/26 ರಂದು ಮುಂಜಾನೆ 11/00 ಘಂಟೆಗೆ ಗುರುಭವನ ಸವದತ್ತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಮತ್ತು ಹಿರಿಯ ನಾಗರಿಕರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ಯನ್ನು ಬಿ ವ್ಹಿ ವಾಂಗಿಯವರು ವಹಿಸಿದ್ದರು. ಉದ್ಘಾಟನೆ ಮಾಡಿ ಮಾತನಾಡಿದ ಅಶ್ವಥ್ ವೈದ್ಯ, ನಿಮ್ಮೆಲ್ಲರ ಹಿರಿತನವನ್ನು ಗಮನಿಸಿದಾಗ ನಾನು ಚಿಕ್ಕವ ನಿಮ್ಮೆಲ್ಲರ ಆಶೀರ್ವಾದದಿಂದ ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ನೀವು ನೀಡಿದ ಮನವಿಯನ್ನು ಮತ್ತು ಸಂಘದ ಕಟ್ಟಡದ ಬಗ್ಗೆ ಶಾಸಕ ವಸಂತ ವೈದ್ಯರಿಗೆ ತಿಳಿಸಿ ನಿಮ್ಮ ಅವಶ್ಯ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್ ಜಿ ಸಿದ್ನಾಳ ಮಾತನಾಡಿ, ನಿವೃತ್ತ ನೌಕರರ ಪಿಂಚಣಿ ನೀಡುತ್ತಿರುವುದು ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ದಿ. ಡಿ ಎಸ್ ನಕ್ಕರೆ ಸುಪ್ರೀಂ ಕೋರ್ಟ್ ಹಿಂದಿನ ನ್ಯಾಯಮೂರ್ತಿಗಳು, ವಕೀಲರನ್ನು ಸ್ಮರಿಸಿ ಅವರ ಕೊಡಿಸಿದ ವರದಾನವೇ ನಮ್ಮ ಹಕ್ಕು ಆಗಿದೆ ಎಂದು ತಿಳಿಸಿದರು.
35-40 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದರೂ ನಮಗೆ ಸಿಗಬೇಕಾದ ಸೌಲಭ್ಯಗಳಾದ ಸಂಧ್ಯಾ ಸುರಕ್ಷಾ, ಕಿರಣ್ ಆರೋಗ್ಯ ಯೋಜನೆ ಮತ್ತು 7ನೇಯ ವೇತನ ಆಯೋಗದ ಶಿಫಾರಸಿನಂತೆ 70-75ವರ್ಷದವರಿಗೆ ಶೇ. 10-15 ಹೆಚ್ಚುವರಿ ಪಿಂಚಣಿ ತಿಳಿಸಿದ್ದರೂ ಮನವಿ ಸಲ್ಲಿಸಿದರೂ ನೀಡದಿರುವುದು ವಿಷಾದನೀಯ ಎಂದು ಹೇಳಿದರು
ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ಬೆಂಡಿಗೇರಿ ಮಾತನಾಡಿ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಮಾನವೀಯತೆಯಿಂದ ಕೈ ಜೋಡಿಸಲು ವಿನಂತಿಸಿದರು ಕೇಂದ್ರ ಮತ್ತು ರಾಜ್ಯ ಸರ್ಕಾರದ 2007 ಮತ್ತು 2009 ರ ಆದೇಶದಂತೆ ಸಿಗುವ ಸೌಲಭ್ಯಗಳ ಕುರಿತು ವಿವರವಾಗಿ ತಿಳಿಸಿದರು
75ವರ್ಷ ತುಂಬಿದ ಹಿರಿಯ ನೌಕರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು
ಅಧ್ಯಕ್ಷತೆ ವಹಿಸಿದ್ದ ಬಿ ವ್ಹಿ ವಾಂಗಿಯವರು ಮಾತನಾಡಿ ಸಂಘದ ಕಟ್ಟಡದ ಕುರಿತು, ರಾಜ್ಯ ಸರ್ಕಾರದ ಮುಂದೆ ಬೇಡಿಕೆಗಳ ಬಗ್ಗೆ, ಕುಟುಂಬ ಪಿಂಚಣಿ ಕುರಿತು ತಿಳಿಸಿದರು ಬಿ ಈ ಓ ಕಾಜಿ, ಪ್ರೊ. ವಾಯ್ ಎಮ್ ಯಾಕೊಳ್ಳಿ , ಚೊಂಚಳ್ಳಿ, ಬೆಂಡಿಗೇರಿ, ಪಾಯನ್ನವರ ಮಾತನಾಡಿದರು
ಸಭೆಯಲ್ಲಿ ಸಾಣಿಕೊಪ್ಪ, ಜಗಾಪೂರ,ಕೆಂಚರಾಹುತ, ಹೊಳೆಯಾಚಿ, ಮುಲ್ಲಾ, ಪಾಯನ್ನವರ, ಶ್ರೀಮತಿ ಸಂಗಮ , ಬಿದರಿ, ಗುರುಮಾತೆ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು
ತೋಟಗಿ ಗುರುಗಳಿಂದ ವರದಿ ವಾಚನ, ಪ್ರಾಸ್ತಾವಿಕ, ಚೊಂಚೊಳ್ಳಿಯವರಿಂದ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು