Homeಸುದ್ದಿಗಳುಮುಗಳಖೋಡದಲ್ಲಿ 137 ನೇ ರವಿವಾರದ ಸತ್ಸಂಗ 

ಮುಗಳಖೋಡದಲ್ಲಿ 137 ನೇ ರವಿವಾರದ ಸತ್ಸಂಗ 

Published on

ಮುಧೋಳ – ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ [ರಿ] ಶ್ರೀಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೆ ರವಿವಾರ ದಿ.ಮಾಚ೯ 1 ರಂದು ಮುಂಜಾನೆ ಸಮಯದಲ್ಲಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ 137 ನೇ ರವಿವಾರದ ಸತ್ಸಂಗ ಕಾರ್ಯಕ್ರಮ ಜರುಗಲಿದೆ ಎಂದು ಪ್ರತಿಷ್ಠಾನದ ಯುವ ಮುಖಂಡ ಎಲ್ ಶ್ರೀನಿವಾಸ ಪ್ರಸಾದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಬೆಳಿಗ್ಗೆ 6.30 ರಿಂದ 7 ರ ವರೆಗೆ ಓಂ ನಮಃ ಶಿವಾಯ ಮಹಾಮಂತ್ರ ಪಠಣ. 7 ರಿಂದ 7.30 ರ ವರೆಗೆ ಗುರು ಸ್ತುತಿ. ಸ್ತೋತ್ರಗಳನ್ನು ಹೇಳುವುದು. 7. 30ರಿಂದ 8 ರ ವರೆಗೆ ಶ್ರೀ ಸಿದ್ಧಾರೂಢರ ಪಾರಾಯಣ ನಡೆಯುವುದು.ನಂತರ ಕುಮಾರ ಗುರು ಪ್ರಸಾದ ಸ್ವಾಮೀಜಿ ಅವರಿಂದ ಆರೂಢರ ಅಭಿಷೇಕ, ಅಷ್ಟೋತ್ತರ ನಾಮಾವಳಿ ಜರುಗುವುದು. ನಂತರ ಮಹಾಮಂಗಲ, ಮಹಾ ಪ್ರಸಾದ ವಿತರಣೆ ಜರುಗುವುದು ಎಂದು ಶ್ರೀನಿವಾಸ ಪ್ರಸಾದ ಅವರು ತಿಳಿಸಿದ್ದಾರೆ

Latest articles

More like this