ಬೆಳಗಾವಿ: ಗೋಕಾಕ ಶಹರದ ಖತೀಬ ಮಸೀದಿ ಬಳಿ 6 ಜನರು ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿ 16 ಗ್ರಾಂ ತೂಕದ ಬಂಗಾರದ ಚೈನ್ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 92/2026 ಕಲಂ: 310(2), 118(1), 126(2) ಸಹ ಕಲಂ: 190 ಬಿಎನ್‌ಎಸ್-23 ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆಕಾಶ ಮಹಾದೇವ ತಳವಾರ, ರಾಮಸಿದ್ದ ಮಾರುತಿ ತೋಳಿ, ರಿತೇಶ ಶಿವಾಜಿ ಫಕೀರೆ, ನಾಗರಾಜ ರಾಮಪ್ಪಾ ತೋಳಿ, ಗೋಪಾಲ ಕಲ್ಲಪ್ಪಾ ತೋಳಿ ಹಾಗೂ ಆರೋಪಿತರಿಗೆ ಬಚ್ಚಿಟ್ಟುಕೊಳ್ಳಲು ಆಶ್ರಯ ನೀಡಿದ ಸಿದ್ದಪ್ಪಾ ಮಾಯಪ್ಪಾ ಕುರುಬನ್ನವರ ಸೇರಿ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ದರೋಡೆ ಮಾಡಿದ ಬಂಗಾರದ ಆಭರಣವನ್ನು ದಾರಿ ಹೋಕರಿಗೆ ಮಾರಾಟ ಮಾಡಿದ್ದಾರೆ. ಅವರಿಂದ 12,000 ರೂ ನಗದು ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.