ಮುಧೋಳ -ಮೆಟ್ಟಿ ಪುಣ್ಯ ಕ್ಷೇತ್ರವನ್ನು ಸುಟ್ಟು ಹೋಗ್ವದಯ್ಯ ಪಾಪ. ಮುಟ್ಟಿ ಭಜಿಸಿರಯ್ಯಾ ನಮ್ಮ ಪುರಂದರ ವಿಠಲನ ಎಂದು ಎಂದು ಬೆಳಗಿನ ಸಮಯದಲ್ಲಿ ಪಾಂಡುರಂಗ ವಿಠಲನ ಭಜಿಸುತ್ತ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಬಲಭೀಮನ ಹಾಗೂ ಸತ್ಯವತಿ ದೇವಿಯ [ಸತ್ಯಮ್ಮ]ಪೂಜೆಯಗೈಯುತ್ತ ಭಕ್ತಿ ಪರಂಪರೆಯ ಕಹಳೆ ಊದಿ ಹರಿಹರರಲ್ಲಿ ಭೇದವಿಲ್ಲದೆ ಸದಾ ಭಕ್ತಿ ಸೇವೆಯಲ್ಲಿ ಮಿಂದೆದ್ದ ಹಿರಿಯ ಜೀವ ಮಲ್ಲಪ್ಪ ಫಕೀರಪ್ಪ ಪೂಜಾರಿ ಹಳೆಯ ತಲೆಮಾರಿನ ಕಲಾವಿದ.
ಇವರು ಮೂಲತಃ ಹುನಗುಂದ ತಾಲೂಕಿನ ಇಸ್ಲಾಂಪುರ ಗ್ರಾಮದ ಬಡಕುಟುಂಬವೊಂದರಲ್ಲಿ 01/06/1954ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ರಂಗಭೂಮಿ ಪ್ರವೇಶಿಸಿ ಹಲವು ಸಾಮಾಜಿಕ ನಾಟಕಗಳಲ್ಲಿ ಸ್ತ್ರೀ – ಪುರುಷ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು .ಅದರಲ್ಲಿ “ಸತಿ ಸರಸ್ವತಿ ” ನಾಟಕದಲ್ಲಿ ಸರಸ್ವತಿ ಪಾತ್ರಕ್ಕೆ ಜೀವ ತುಂಬಿದ ಮಲ್ಲಪ್ಪ ಪೂಜಾರಿ ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡವರು.
ನಂತರದಲ್ಲಿ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮಕ್ಕೆ ಬಂದು ಖಾಯಂ ವಾಸ ಮಾಡಿದ ಇವರು ಅಲ್ಲಲ್ಲಿ ನಡೆಯುವ ಹರಿಪಂಥದ ದಿಂಡಿ-ಉತ್ಸವಗಳಲ್ಲಿ ಭಾಗವಹಿಸಿ ಅಭಂಗ, ಭಾರೂಢ, ಭಜನೆ ಪದಗಳನ್ನು ಹೇಳಿ ಜನಮೆಚ್ಚುಗೆ ಪಡೆದ ಮಲ್ಲಪ್ಪ ಶ್ರೀ ಮನ್ ನಿಜಗುಣ ಶಿವಯೋಗಿಗಳ, ಸಫ೯ಭೂಷಣರ, ಮಹಾಲಿಂಗರಂಗರ, ಪುರಂದರ ದಾಸರ, ಕನಕದಾಸರ ಪದಗಳನ್ನು ನಿರಗ೯ಳವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಮಲ್ಲಪ್ಪ ತಮ್ಮ ಸಂತ ಜೀವನದಲ್ಲಿ ಕಲೆಯನ್ನು ಕಾಯಕ ಮಾಡಿಕೊಡು ಅವಿಶ್ರಾಂತವಾಗಿ ಕಲಾಸೇವೆಯನ್ನು ಮುಂದುವರಿಸಿದ್ಧಾರೆ.
ಸುಮಾರು 60 ವರ್ಷಕ್ಕೂ ಹೆಚ್ಚು ಕಾಲ ಕಲೆಗಾಗಿ ಅರ್ಪಣೆಯನ್ನು ಮಾಡಿಕೊಂಡಿದ್ದ ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಅಭಿನಂದಿಸಿವೆ. 70 ವರ್ಷಗಳನ್ನು ದಾಟಿದ ಈ ಹಿರಿಯ ಕಲಾ ಜೀವಿಗೆ ಇನ್ನೂ ಸರ್ಕಾರದ ಯಾವುದೇ ಮಾಶಾಸನಗಳಾಗಲಿ ಗೌರವಗಳಾಗಲಿ ಸಿಗದೇ ಇರುವುದು ನೋವಿನ ಸಂಗತಿ. ಈಗಲಾದರೂ ಕರ್ನಾಟಕ ಘನ ಸರ್ಕಾರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿ ಮಾಶಾಸನವನ್ನ ನೀಡುವಂತಾಗಲಿ ಎಂದು ಕನಾ೯ಟಕ ರಾಜ್ಯ
ಸವ೯ಕಲಾವಿದರ ಒಕ್ಕೂಟದ ಒತ್ತಾಸೆಯಾಗಿದೆ
ಶರಣಬಸವ ಶಾಸ್ತ್ರಿಗಳು ಶ್ರೀ ಸಿದ್ಧಾರೂಢ ಭಾರತಿ ಆಶ್ರಮ ಮುಗಳಖೋಡ 587113