Homeಸುದ್ದಿಗಳುಮುಗಳಖೋಡದಲ್ಲಿ ದಿ.20.ರಂದು ಬಸವ ಜಯಂತಿ 

ಮುಗಳಖೋಡದಲ್ಲಿ ದಿ.20.ರಂದು ಬಸವ ಜಯಂತಿ 

Published on

ಮುಧೋಳ – ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸೋಮವಾರ ದಿ. 20 ರಂದು ವಿಶ್ವಮಾನ್ಯ ಪುರುಷ “ಬಸವಣ್ಣ”ವರ ಜಯಂತ್ಯುತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವ ಮುಖಂಡ ಆಶ್ರಮದ ಪೂಜ್ಯರಾದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡುತ್ತ ಬೆಳಿಗ್ಗೆ 8 ಗಂಟೆಗೆ ಭಕ್ತಿಭಂಡಾರಿ ಬಸವಣ್ಣವರ ಭಾವಚಿತ್ರದ ಉತ್ಸವ ಜರುಗುವದು. ವಿವಿಧ ಕಲಾವಿದರಿಂದ ಭಜನೆ .ವಚನ ಗಾಯನ. ತತ್ವಪದಗಳ ಸೇವೆ ಜರುಗುವುದು. ನಂತರ ಭಕ್ತಿ ಭಾವದಿಂದ ಅಪ್ಪ ಬಸವಣ್ಣ ಅವರಿಗೆ ಪುಷ್ಪಾರ್ಚನೆ. ಮುತ್ತೈದರಿಂದ ಆರತಿ. ಜೋಗುಳ ಹಾಡುವುದು. ನಾಮಕರಣ ಕಾರ್ಯಕ್ರಮ ನಡೆಯಲಿದೆ.

ಈ ಸಮಾರಂಭದ ಸನ್ನಿಧಾನವನ್ನು ‌ ‌ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪರಮಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳು ವಹಿಸುವರು. ನಾವಲಗಿಯ ಹಿರಿಯ ಶರಣ ಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸುವರು. ಹಿರಿಯರಾದ ಮಲ್ಲು ಮುಚ್ಚಂಡಿ. ಪಿ .ಬಿ ಸುಣಗಾರ, ರಂಗನಗೌಡ ಮಂಟೂರ, ಶಂಕರಗೌಡ ಪಾಟೀಲ, ನಿಂಗನಗೌಡ ಮಂಟೂರ ಉಪಸ್ಥಿತರಿರುವರು.

ಆಯ್.ಎಸ್. ಮಂಟೂರ ಗ್ರಾಮೀಣಾಭಿವೃದ್ಧಿ ಜನ ಸೇವಾ ಸಂಸ್ಥೆಯ ಮುಖಂಡ ಕೃಷ್ಣೇಗೌಡ ಮಂಟೂರ ಜ್ಯೋತಿಯನ್ನು ಬೆಳಗಿಸುವರು. ಬಸವಣ್ಣವರನ್ನು ಕುರಿತು ವಿಶೇಷ ಉಪನ್ಯಾಸಗಳು ಜರುಗುವುದು .ಇದೇ ಸಂದರ್ಭದಲ್ಲಿ ಸಾಧಕರನ್ನು ಸತ್ಕರಿಸಲಾಗುವುದು ಎಂದು ಗುರುಪ್ರಸಾದ್ ಸ್ವಾಮೀಜಿ ಅವರು ತಿಳಿಸಿದರು.ಪ್ರತಿಷ್ಠಾನದ ಮುಖಂಡರಾದ ಶ್ರೀಶೈಲ ಪಾಟೀಲ ಇದ್ದರು

Latest articles

More like this