Homeಸುದ್ದಿಗಳುಭಾಗೋಜಿಯವರು ಬೆಳಗಾವಿ ಎಂದೂ ಮರೆಯಬಾರದ ವ್ಯಕ್ತಿ : ಡಾ. ಜಗಜಂಪಿ

ಭಾಗೋಜಿಯವರು ಬೆಳಗಾವಿ ಎಂದೂ ಮರೆಯಬಾರದ ವ್ಯಕ್ತಿ : ಡಾ. ಜಗಜಂಪಿ

Published on

ಬೆಳಗಾವಿ – ” ಪ್ರಹ್ಲಾದಕುಮಾರ ಭಾಗೋಜಿಯವರು ಶಿಕ್ಷಣ, ಸಾಹಿತ್ಯ , ಭಾಷಾ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಸ್ಮರಣಾರ್ಹವಾದದ್ದು. ಬೆಳಗಾವಿ ಎಂದೂ ಮರೆಯಬಾರದಂತಹ ವ್ಯಕ್ತಿ ಅವರು ಎಂದು ಹಿರಿಯ ವಿದ್ವಾಂಸರಾದ ಡಾ. ಬಸವರಾಜ ಜಗಜಂಪಿ ಹೇಳಿದರು.

ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ “ಮರೆಯಲಾಗದ ಮಹನೀಯರು” ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದ ಜಗಜಂಪಿಯವರು ‌” ಭಾಗೋಜಿಯವರು ಬರೆದದ್ದು ಕಡಿಮೆಯಾದರೂ ಬರೆದಷ್ಟೂ ಗಟ್ಟಿಕಾಳು. ವಿಷಯ ಯಾವುದೇ ಇದ್ದರೂ ಪ್ರಭುತ್ವದಿಂದ ಮಾತನಾಡುವ ಅಸಾಮಾನ್ಯ ಶಕ್ತಿ ಅವರದಾಗಿತ್ತು. ಬೆಳಗಾವಿಯಲ್ಲಿ ಕನ್ನಡದ ಅಸ್ಮಿತೆಯಾಗಿ ಗೌರವದಿಂದ ಬಾಳಿದವರು ” ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಎಸ್. ಎಂ. ಕುಲಕರ್ಣಿ ಅವರು “ಮರೆಯಲಾಗದ ಮಹನೀಯರು” ಕನ್ನಡದ ಅಭಿಮಾನವನ್ನು ಹೆಚ್ಚಿಸುವ ಹೊಸಬಗೆಯ ಕಾರ್ಯಕ್ರಮವಾಗಿದ್ದು ಕನ್ನಡದ ಬೆಳವಣಿಗೆಗೆ ಪೂರಕವಾಗಿದೆ” ಎಂದರು.

ಸುನಂದಾ ಮುಳೆಯವರಿಂದ ಪ್ರಾರ್ಥನೆ, ಬಸವರಾಜ ಗಾರ್ಗಿಯವರಿಂದ ಸ್ವಾಗತ, ಎಲ್. ಎಸ್. ಶಾಸ್ತ್ರಿಯವರಿಂದ ಪ್ರಾಸ್ತಾವಿಕ ನುಡಿಗಳಾದವು. ನಂತರ ನಡೆದ ಮುಂಗಾರು ಕವಿಗೋಷ್ಠಿಯಲ್ಲಿ ಅಶೋಕ ಮಳಗಲಿಯವರು ಆಶಯ ಭಾಷಣ ಮಾಡಿದರು.

ರಾಮಚಂದ್ರ ಕೆಳಗಿನಪಾಲ, ಕಿರಣ ಗಣಾಚಾರಿ, ಸುನೀಲ ಪರೀಟ, ರಾಜನಂದಾ ಘಾರ್ಗಿ, ಸುನೀತಾ ನಂದೆಣ್ಣವರ, ಗಂಗಾ ಚಕ್ರಸಾಲಿ, ಜ್ಯೋತಿ ಬದಾಮಿ, ಸುನಂದಾ ಮುಳೆ, ಶೈಲಜಾ ತಳವಾರ, ಶೋಭಾ ಬನಶಂಕರಿ, ಹೇಮಾ ಸೊನೊಳಿ, ಮೀನಾಕ್ಷಿ ಸೂಡಿ, ರವಿ ಕೊಟಾರಗಸ್ತಿ, ಗಂಗವ್ವ ಮಠಪತಿ, ರೇಖಾ ದೇಸಾಯಿ, ಸುನಂದಾ ಹಾಲಭಾವಿ, ದಾಮೋದರ‌ ಬಡಿಗೇರ, ಚಂದ್ರಶೇಖರ ನವಲಗುಂದ, ರವಿ ಹಲಕರ್ಣಿ, ಅಕ್ಕಮಹಾದೇವಿ ತೆಗ್ಗಿ, ಆಶಾ ಯಮಕನಮರ್ಡಿ ಕವನ ವಾಚನ ಮಾಡಿದರು. ಚಂದ್ರಶೇಖರ ನವಲಗುಂದ ಅವರಿಂದ ವಂದನಾರ್ಪಣೆ ಮತ್ತು ಆಶಾ ಯಮಕನಮರ್ಡಿಯವರಿಂದ ನಿರೂಪಣೆಗಳಾದವು. ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಗೌ. ಕಾರ್ಯದರ್ಶಿ ಆರ್. ಬಿ. ಕಟ್ಟಿ ಉಪಸ್ಥಿತರಿದ್ದರು. ಬಿ. ಎಸ್. ಗವಿಮಠ, ಎಂ. ಎಸ್. ಇಂಚಲ, ಪ್ರೊ. ಆರ್. ವಿ. ಭಟ್ಟ, ಮುರುಗೇಶ ಶಿವಪೂಜಿ, ಶಶಿಧರ ಹೊಸಕೋಟೆ, ಡಾ. ಎಚ್. ಐ. ತಿಮ್ಮಾಪುರ, ಎಸ್. ಬಿ. ನಾಗರಾಜ, ಮದನ ಕಣಬೂರ ಚಿದಂಬರ ಮುನವಳ್ಳಿ ಮೊದಲಾದವರು ಭಾಗವಹಿಸಿದ್ದರು.

Latest articles

More like this