ಮೂಡಲಗಿ – ಪ್ರಸ್ತುತ ದಿನಗಳಲ್ಲಿ ಯುವಕರಿಗೆ ನಾಗರಿಕತೆ ಮತ್ತು ಸಂಸ್ಕಾರ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಕೆ ಎಲ್ ಇ ಸಂಸ್ಥೆಯ ಪ್ರಕಾಶ ಪಾಟೀಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು
ಅವರು ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಯು ದುರದುಂಡಿಯಲ್ಲಿ ಕಳೆದ ಏಳು ದಿನಗಳಿಂದ ನಡೆದ ಎನ್ ಎಸ್ ಎಸ್ ಶಿಬಿರದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆ ಯ ಚೇರ್ಮನ್ ರಾದ ರಮೇಶ ಬೆಳಕೂಡ ಅವರು ಮಾತನಾಡಿ ವಿದ್ಯಾರ್ಥಿ ಗಳು ತಮ್ಮ ತಂದೆ ತಾಯಿಯ ಋಣ ತೀರಿಸಲು ಒಳ್ಳೆಯ ಭವಿಷ್ಯಕ್ಕೆ ನಾಂದಿಯಾಗಲು ಕೇವಲ ಶಿಕ್ಷಣ ಮುಖ್ಯ ಅಲ್ಲ , ಸರಕಾರಿ ನೌಕರಿ ಅವಲಂಬಿಸಿ ಕಲಿಯಬೇಡಿ ತಮ್ಮ ಕುಟುಂಬ ದೊಂದಿಗೆ ಕೃಷಿ, ಹಲವು ಕ್ಷೇತ್ರದಲ್ಲಿ ದುಡಿಮೆ ಮಾಡಿ ಸಾಧಿಸಿ ತೋರಿಸಿ ಎಂದು ಉದಾಹರಣೆಯೊಂದಿಗೆ ಹೇಳಿದರು.
ಈ ಸಂದರ್ಭದಲ್ಲಿ ದುರದುಂಡಿ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಗಣೇಶ ತೋಟಗಂಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಿ ಎಸ್ ಹುಕ್ಕೇರಿ, ಶಿಕ್ಷಕರಾದ ಉದ ಪ್ಪ ಮಾಕನ್ನವರ್ ಪುಂಡಲಿಕ ಪರೀಟ್, ಡಾಕ್ಟರ್ ಎಸ್ ಎಸ್ ಪೂಜಾರಿ ಚೇತನ ಕೋಳಿ, ಕಲ್ಲಪ್ಪ ಸಂಗೋಟಿ ದುಂಡಪ್ಪ ಅಂತರಗಟ್ಟಿ ವಿಜಯ ಸೋಲಾಪುರ, ಮುಖ್ಯ ಅಧ್ಯಾಪಕ ಗಣಪತಿ ಉಪ್ಪಾರ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು
ಆರಂಭದಲ್ಲಿ ಪ್ರಾಚಾರ್ಯ ಡಾ. ಎಸ್ ಎಸ್ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಆಡಳಿತ ಅಧಿಕಾರಿ ಪ್ರಕಾಶ ಗರಗಟ್ಟಿ ಮಾತನಾಡಿದರು, ಈ ಸಂದರ್ಭದಲ್ಲಿ ಎನ್ಎಸ್ಎಸ್ ಶಿಬಿರದಲ್ಲಿ ಸಹಾಯ ಮಾಡಿದ ದುರ್ದುರ್ಗ ಗ್ರಾಮದ ಗಣ್ಯರನ್ನು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಕಾಣಿಕೆ ನೀಡಿ ಸಂಸ್ಥೆಯ ಚೇರ್ಮನ್ನರು ಸನ್ಮಾನಿಸಿದರು, ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸವಿತಾ ಮಸರಗುಪ್ಪಿ ಕಾರ್ಯನಿರ್ವಹಿಸಿ ಎನ್ಎಸ್ಎಸ್ ಯೋಜನಾಧಿಕಾರಿಯದ ಲಕ್ಕಪ್ಪ ಕುಮರೇಶಿ, ಕೊನೆಯಲ್ಲಿ ವಂದಿಸಿದರು ಒಟ್ಟಿನಲ್ಲಿ ಕಾರ್ಯಕ್ರಮವು ಯಶಸ್ವಿಗೊಂಡಿತು