Homeಸುದ್ದಿಗಳುಸಂಬಳ ನೀಡದ ಬೀದರ ಬ್ರಿಮ್ಸ್ ಆಸ್ಪತ್ರೆ ; ಯುವತಿ ಆತ್ಮಹತ್ಯೆ ಯತ್ನ

ಸಂಬಳ ನೀಡದ ಬೀದರ ಬ್ರಿಮ್ಸ್ ಆಸ್ಪತ್ರೆ ; ಯುವತಿ ಆತ್ಮಹತ್ಯೆ ಯತ್ನ

Published on

ಬೀದರ – ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿಲೋಫರ್ ಎಂಬ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ

ಬ್ರಿಮ್ಸ್‌ನಲ್ಲಿ 7 ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿಲೋಫರ್ ತನಗೆ ಕಳೆದ 11 ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ
ಈ ಘಟನೆಯಿಂದ ನೊಂದ ಯುವತಿಯ ತಾಯಿ ಬ್ರಿಮ್ಸ್ ಆಸ್ಪತ್ರೆಯ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ರಿಜ್ವಾನಮ್, ಯುವತಿಯ ತಾಯಿ

4 ತಿಂಗಳ ಹಿಂದೆ ನನ್ನ ಗಂಡ ನಿಧನರಾಗಿದ್ದು ಕುಟುಂಬ ನಿರ್ವಹಣೆಯ ಜವಾಬ್ದಾರಿ ನನ್ನ ಮಗಳ ಮೇಲಿದೆ. ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಮಗಳು ಸಂಬಳ ಕೇಳಿದರೆ ಆಕೆಗೆ ಧಮ್ಕಿ ಹಾಕಿ ಮಾನಸಿಕ ಟಾರ್ಚರ್ ನೀಡಿದ್ದಾರೆ. ಹೀಗಾಗಿ ನನ್ನ ಮಗಳು ಗುಳಿಗೆ ನುಂಗಿದ್ದಾಳೆ ಎಂದು ತಾಯಿಯ ಕಣ್ಣೀರು ಹಾಕಿದ್ದು ನಮಗೆ ನ್ಯಾಯ ಕೊಡಿ ಈಶ್ವರ ಖಂಡ್ರೆ ಸಾಹೇಬರೇ ಎಂದು ಯುವತಿ ತಾಯಿ ಕಣ್ಣೀರು ಹಾಕಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this