ರಬಕವಿ-ಬನಹಟ್ಟಿ- ರಬಕವಿಯ ಶುಭಂ ವಾರ್ತೆ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಮಹೇಶಕುಮಾರ ಬಿ.ಕೆ.ಅವರನ್ನು ಕನ್ನಡ ಸೇನೆಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಾಡಿನ ಭಾಷೆ, ನೆಲ ಮತ್ತು ಜಲ ಕ್ಷೇತ್ರದಲ್ಲಿ ಮಹೇಶಕುಮಾರ ಅವರು ಅತಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡು ಹೋರಾಟ ಮಾಡಿರುವುದನ್ನು ಗಮನಿಸಿ ಕನ್ನಡ ಸೇನೆಗೆ ” ರಾಜ್ಯ ಉಪಾಧ್ಯಕ್ಷರು ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿ”ಯನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನ್ನಡ ಸಿರಿ ಆನಂದಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.