ಲಿಂಗಾಯತ ಧರ್ಮದಲ್ಲಿ ಬಿರಕು ? ಪೂಜ್ಯ ಶ್ರೀ ಲಿಂಗ ಬಸವ ಪಟ್ಟದೇವರು.. ಯಾಕೆ ವೀರಶೈವ ಲಿಂಗಾಯತ ಅಂಭಿನಂದನಾ ಕಾರ್ಯಕ್ರಮ ನೇತ್ರತ್ವ ವಹಿಸಿಕೊಂಡರು..ಪೂಜ್ಯ ಶ್ರೀ ಲಿಂಗ ಬಸವ ಪಟ್ಟದೇವರು ..
ಬೀದರ – ಬಸವಣ್ಣನವರ ಕರ್ಮಭೂಮಿ ಬೀದರ ನಲ್ಲಿ ಇಂದು ವೀರಶೈವ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ಬಿ .ಈಶ್ವರ ಖಂಡ್ರೆಯವರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಪರ ಹೋರಾಟ ನಡೆಸಿದ ಅಧ್ಯಕ್ಷರು ಅನುಭವ ಮಂಟಪ ಬಸವಕಲ್ಯಾಣ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಂದು ಕರೆದುಕೊಂಡಿರುವ ಭಾಲ್ಕಿಯ ಪೂಜ್ಯ ಶ್ರೀ ಬಸವ ಲಿಂಗ ಪಟ್ಟದೇವರು ನೇತೃತ್ವ ವಹಿಸಿದ್ದು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ನಡೆಯುತ್ತದೆ.
ಪೂಜ್ಯ ಶ್ರೀ ಲಿಂಗ ಪಟ್ಟದೇವರು ಲಿಂಗಾಯತ ಧರ್ಮ ಮಠಾಧೀಶರು ಒಕ್ಕೂಟ ಅಧ್ಯಕ್ಷರು. ನಮ್ಮದು ಲಿಂಗಾಯತ ಧರ್ಮ ಎಂದು ಹೆಮ್ಮೆಯಿಂದ ಹೇಳಿ ನಾವು ವೀರಶೈವ ಲಿಂಗಾಯತ ಅಲ್ಲ..ಹಿಂದೂಗಳು ಅಲ್ಲ ನಾವು ಲಿಂಗಾಯತರೆಂದು ಹೆಮ್ಮೆಯಿಂದ ಹೇಳಲು ಯಾರಿಗೂ ಹೆದರುವ .ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದ ಪೂಜ್ಯ ಶ್ರೀ ಲಿಂಗ ಬಸವ ಪಟ್ಟದೇವರು ..ಇವಾಗ ವೀರಶೈವ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ಬಿ ಈಶ್ವರ ಖಂಡ್ರೆ ಅವರ ಅಭಿನಂದನಾ ಸಮಾರಂಭದ ನೇತ್ರತ್ವ ವಹಿಸಿಕೊಂಡು ಬೀದರ ನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಆಶ್ಚರ್ಯ ಹುಟ್ಟಿಸಿದೆ. ಶ್ರೀ ಲಿಂಗ ಬಸವ ಪಟ್ಟದೇವರನ್ನು ನಂಬಿ ಜಾತಿ ಗಣತಿ ಯಲ್ಲಿ ನಾವು ಲಿಂಗಾಯತ ಧರ್ಮ ಎಂದು ಬರೆಸಿದ್ದು, ಈಗ ಅವರೇ ವೀರಶೈವ ಲಿಂಗಾಯತ ಧರ್ಮದ ಕಾರ್ಯಕ್ರಮ ನೇತ್ರತ್ವದ ವಹಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೂಜ್ಯ ಶ್ರೀ ಲಿಂಗ ಬಸವ ಪಟ್ಟದೇವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಲಿಂಗಾಯತ ಧರ್ಮದ ಅನುಯಾಯಿಗಳು..
ಪೂಜ್ಯ ಶ್ರೀ ಲಿಂಗ ಬಸವ ಪಟ್ಟದೇವರು ಲಿಂಗಾಯತ ಧರ್ಮ ಜನರು ಇವರಿಗೆ ನಂಬಿಕೆ ಇಟ್ಟುಕೊಂಡು ಜಾತಿ ಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸಿದ.. ಈ ಲಿಂಗಾಯತ ಜನರಿಗೆ ಹೇಗೆ ಉತ್ತರ ಕೊಡುತ್ತಾರೆ ಎಂಬದು ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ