ಹುನಗುಂದ: ನಗರದ ಬಸ್ ನಿಲ್ದಾಣ ಸಮೀಪದ ಸೇತುವೆ ಮೇಲಿನ ಪಾದಾಚಾರಿ ಮಾರ್ಗದಲ್ಲಿ ೨೪×೭ ನೀರು ಸರಬರಾಜು ಪೈಪ್ ಹಾಕಿದ್ದರಿಂದ ನಿತ್ಯ ಸಾರ್ವಜನಿಕರು ಭಯದ ನೆರಳಲ್ಲಿ ಸಾಗಬೇಕಾಗಿದೆ
ಕೇವಲ ನಾಲ್ಕು ಅಡಿ ಅಗಲದ ಈ ಪಾದಾಚಾರಿ ಮಾರ್ಗದಲ್ಲಿ ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸುಮಾರು ಮೂರ್ನಾಲ್ಕು ಸಾವಿರ ಜನರು ನಿತ್ಯ ಸಂಚರಿಸುತ್ತಿದ್ದಾರೆ. ಬೀದಿ ದೀಪದ ಕಂಬಗಳು ಮತ್ತು ನೀರಿನ ಪೈಪ್ ಹಾಕಿದ್ದರಿಂದ ವಾಹನ ಸಂಚಾರ ಸಮಯದಲ್ಲಿ ಹೆದರಿಕೆ ಆಗುತ್ತಿದೆ. ಅದರಂತೆ ಒಂದು ಬದಿಯಲ್ಲಿ ಫೋನ್ ವಾಯರ್ ಪೈಪ್ ಹಾಕಿ ಬಿದ್ದ ತಗ್ಗು ಮುಚ್ಚದೇ ವರ್ಷಗಳೆ ಕಳೆದಿವೆ.
ಈ ಸಾರ್ವಜನಿಕ ಮುಖ್ಯ ಸಮಸ್ಯೆ ಬಗ್ಗೆ ನಾಗರಿಕ ಸೇವಾ ಸುಧಾರಣಾ ಸಮಿತಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕೇಳಿದರೆ ಪುರಸಭೆ ಮುಖ್ಯಾಧಿಕಾರಿ ಮತ್ತು ಕೆಯುಡಬ್ಲ್ಯೂಎಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ.
ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳಿಗೆ ಪತ್ರಿಸಿದ್ದಾರೆ. ಅನಾಹುತ ಆಗುವ ಮುಂಚೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲ ಎಸ್.ಎನ್.ಪಾಟೀಲ ಮತ್ತು ನಾಗರಿಕ ಸೇವಾ ಸುಧಾರಣಾ ಸಮಿತಿ ಅಧ್ಯಕ್ಷ ವ್ಹಿ.ಆರ್.ಜನಾದ್ರಿ ಮತ್ತು ಕಾರ್ಯದರ್ಶಿ ಜಿ.ಬಿ.ಕಂಬಾಳಿಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.