Homeಸುದ್ದಿಗಳುಬೀದರ ಶಾಹೀನ್ ಪರಿವಾರದಿಂದ ವಕ್ಫ್ ಆಸ್ತಿ ಬಿಡುಗಡೆಗೊಳಿಸಿ - ಅಬ್ದುಲ್ ಶೇಮಿ

ಬೀದರ ಶಾಹೀನ್ ಪರಿವಾರದಿಂದ ವಕ್ಫ್ ಆಸ್ತಿ ಬಿಡುಗಡೆಗೊಳಿಸಿ – ಅಬ್ದುಲ್ ಶೇಮಿ

Published on

ಬೀದರ – ನಗರದ ಶಾಹೀನ್ ಸ್ಕೂಲ್ ಪರಿವಾರದಿಂದ ವಕ್ಫ್ ಗೆ ಸಂಬಂಧಿಸಿದ ಸುಮಾರು ೮ ಸಾವಿರ ಎಕರೆ ಜಮೀನು ಕಬಳಿಕೆಯಾಗಿದೆ. ನನ್ನ ಮೂರು ಎಕರೆ ಕೂಡ ಅವರೇ ಕಬಳಿಕೆ ಮಾಡಿದ್ದಾರೆ ಎಂದು ಅಬ್ದುಲ್ ಶೇಮಿ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸಲ್ಮಾನ ನಾಯಕರಾದ ಜಮೀರ ಅಹ್ಮದ ಹಾಗೂ ರಹೀಂ ಖಾನರ ವಿರುದ್ಧ ಗರಂ ಆದರು.

ಜಮೀರ ಹಾಗೂ ರಹೀಂ ಖಾನರೇ ನೀವು ಮುಸ್ಲಿಮರ ಆಧಾರದ ಮೇಲೆ ಸಚಿವ ಸ್ಥಾನ ಕೇಳುತ್ತೀರಿ. ನಾನೂ ಕೂಡ ಮುಸಲ್ಮಾನನೇ ನನಗೆ ಅನ್ಯಾಯವಾಗಿದೆ ನಿಮ್ಮ ಸಮುದಾಯದ ವ್ಯಕ್ತಿಗೆ ಅನ್ಯಾಯವಾದರೆ ಸುಮ್ಮನೆ ಯಾಕಿದ್ದೀರಿ ಎಂದು ಪ್ರಶ್ನೆ ಮಾಡಿದರು.

ವಕ್ಫ್ ಆಸ್ತಿ ಕಬಳಿಕೆ ಪ್ರಶ್ನೆ ಮಾಡಿದ್ದಕ್ಕೆ ನನಗೆ ಫೋನಿನಲ್ಲಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅಬ್ದುಲ್ ಅವರು, ಬೆದರಿಕೆಯ ಆಡಿಯೋ ಕೇಳಿಸಿದರು. ಶಾಹೀನ್ ಪರಿವಾರದ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this