Homeಸುದ್ದಿಗಳುಶ್ರೀಮತಿ ನಂದಿನಿ ಎಂ. ಬಳ್ಳಾ ಅವರಿಗೆ ‘ಶ್ರೀ ದೇವಲ ಮಹರ್ಷಿ ಸೇವಾರತ್ನ’ ಪುರಸ್ಕಾರ

ಶ್ರೀಮತಿ ನಂದಿನಿ ಎಂ. ಬಳ್ಳಾ ಅವರಿಗೆ ‘ಶ್ರೀ ದೇವಲ ಮಹರ್ಷಿ ಸೇವಾರತ್ನ’ ಪುರಸ್ಕಾರ

Published on

ಬಾಗಲಕೋಟೆ: ಸಮಾಜಸೇವೆ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಶ್ರೀಮತಿ ನಂದಿನಿ ಎಂ. ಬಳ್ಳಾ, ಸಹ ಶಿಕ್ಷಕರು, ಅವರಿಗೆ ‘ಶ್ರೀ ದೇವಲ ಮಹರ್ಷಿ ಸೇವಾರತ್ನ’ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ದೇವಾಂಗ ನೌಕರರ ಪತ್ತಿನ ಸಹಕಾರಿ ಸಂಘ, ಬಾಗಲಕೋಟೆಯ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅವರು, 100ಕ್ಕೂ ಹೆಚ್ಚು ಸದಸ್ಯರನ್ನು ಸಂಘಟಿಸುವ ಮೂಲಕ ಸಮಾಜದ ಸಂಘಟನಾತ್ಮಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ದೇವಾಂಗ ನೌಕರರ ಬಡಾವಣೆ ನಿರ್ಮಾಣ ಹಾಗೂ ಸಮಾಜದ ನೌಕರರಿಗೆ ನಿವೇಶನ ದೊರಕಿಸುವ ಕಾರ್ಯದಲ್ಲಿ ಹಿರಿಯರೊಂದಿಗೆ ಕೈಜೋಡಿಸಿ ಸಕ್ರಿಯವಾಗಿ ಶ್ರಮಿಸಿದ್ದಾರೆ.

ಇದಲ್ಲದೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಗಲಕೋಟೆ ತಾಲೂಕು ಘಟಕದ ನಿಕಟಪೂರ್ವ ಸಹಕಾರ್ಯದರ್ಶಿಯಾಗಿ ಶಿಕ್ಷಕರ ಹಿತಾಸಕ್ತಿ, ಸೇವೆ ಹಾಗೂ ಸಂಘಟನೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ಅವರು, ‘ವಿವಿಕ್ಷಾ ಪ್ರಕಾಶನ’ದ ಮೂಲಕ ಪ್ರಕಾಶನ ಕ್ಷೇತ್ರಕ್ಕೂ ಪ್ರವೇಶಿಸಿ ಸಾಹಿತ್ಯ ಸೇವೆಗೆ ಹೊಸ ಆಯಾಮ ನೀಡಿದ್ದಾರೆ.

ಶಿಕ್ಷಣ, ಸಮಾಜಸೇವೆ, ಸಂಘಟನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಬಹುಮುಖ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ನಂದಿನಿ ಎಂ. ಬಳ್ಳಾ ಅವರ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವ ಇತರರಿಗೆ ಮಾದರಿಯಾಗಿದೆ. ಅವರ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಉನ್ನತ ಸೇವೆ ಸಲ್ಲಿಸಲು ಮಹಾತಾಯಿ ಬನಶಂಕರಿ ದೇವಿಯ ಆಶೀರ್ವಾದ ಸದಾ ಇರಲಿ ಎಂದು ಗಣ್ಯರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.

Latest articles

More like this