ಪ್ರತಿವರ್ಷ ದಾಖಲಾತಿ ಒದಗಿಸುವ ಸಮೀಪದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಪ್ರೌಢಶಾಲೆಗೆ ಆಹ್ವಾನಿಸಿ ಅವರಿಗೆ ಶಾಲೆಯಲ್ಲಿರುವ ಎಲ್ಲಾ, ಶಿಕ್ಷಕರನ್ನು ಹಾಗೂ ಇಲ್ಲಿ ಸಿಗುವ ಸೌಲಭ್ಯಗಳನ್ನು ಪರಿಚಯಿಸುವ ಇಲ್ಲೇ ದಾಖಲಾತಿ ಪಡೆಯುವಂತೆ ಸಿಹಿ ವಿತರಿಸಿ ವಿನಂತಿಸುವ ಕಾರ್ಯಕ್ರಮ ಜರುಗಿತು.
ಪ್ರೌಢಶಾಲೆಯ ಸಮೀಪ ಇರುವ 20 ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಲ್ ವೈ ಅಡಿಹುಡಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಆಗಮಿಸಿ ಪ್ರೌಢಶಾಲೆಯನ್ನು ವೀಕ್ಷಿಸಿ ಖುಷಿ ಖುಷಿಪಟ್ಟರು.
ಇಲ್ಲಿನ ಪ್ರತ್ಯೇಕ ಗಣಕಯಂತ್ರ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ ಕ್ರೀಡಾ ಕೊಠಡಿ, ಚಿತ್ರಕಲಾ ಕೊಠಡಿ, ಬಾಲಕ ಬಾಲಕಿಯರಿಗೆ ಪ್ರತ್ಯೇಕ ವಾಚನಾಲಯ ಸೌಲಭ್ಯ, ಆಟೋಮೊಬೈಲ್ ಪ್ರಯೋಗಾಲಯ, ಬ್ಯೂಟಿ ಅಂಡ್ ವೆಲ್ ನೆಸ್ ಪ್ರಯೋಗಾಲಯ ಇತ್ಯಾದಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು ಮತ್ತು ಇಲ್ಲೇ ದಾಖಲಾತಿ ಪಡೆಯುವುದಾಗಿ ಭರವಸೆ ನೀಡಿದರು.