ಭಯ ಬೇಡ ಮಗಳೇ
ಭಯ ಭೀತಿ ಬೇಡ ಮಗಳೇ,
ಧೈರ್ಯದಿಂದ ಹೆಜ್ಜೆ ಹಾಕು,
ಬಾಳ ಪಯಣದ ಹಾದಿಯಲ್ಲಿ
ಗೆಲುವಿನ ನಗೆಯ ಬೀರು.
ಸೋಲು ಗೆಲುವು ಸಹಜ
ಇಲ್ಲಿ, ಎದೆಗುಂದದೆ ನುಗ್ಗು,
ನಿನ್ನ ಕನಸಿನ ಗೋಪುರಕ್ಕೆ
ಆತ್ಮವಿಶ್ವಾಸವೇ ಅಡಿಪಾಯ.
ಕತ್ತಲ ನಂತರ ಬೆಳಕುಂಟು,
ಕಷ್ಟದ ನಂತರ ಸುಖವು
ಹಚ್ಚಿರಲಿ ಅರಿವಿನ ದೀಪ
ಸಂತಸ ಯಶದ ಸುಂದರ ರೂಪ
ಸವಾಲುಗಳ ಬೆಟ್ಟವನು ಏರಿ
ನಿಲ್ಲುವ ಹಠ ನಿನಗಿರಲಿ.
ಅಂಜಿಕೆ ಎಂಬುದು ವೈರಿ ,
ಅದನು ಮೆಟ್ಟಿ ನಿಲ್ಲು ನೀನು,
ಜಗತ್ತನ್ನೇ ಗೆಲ್ಲುವ ಶಕ್ತಿ
ನಿನ್ನೊಳಗಿದೆ ಮರೆಯದಿರು ಚಿನ್ನ.
ಹೆಣ್ಣು ಅಬಲೆಯಲ್ಲ ಸಬಲೆ
ತೋರಿಸು ಜಗಕೆ,
ನಿನ್ನ ಸಾಧನೆಯ ದಾರಿ
ದೀಪವಾಗಲಿ ನೂರು ಜನಕೆ.
ಇರಲಿ ದೇವರ ಅಮ್ಮನ ಹರಕೆ,
ಅಪ್ಪನ ಪ್ರೀತಿ ಸದಾ ನಿನ್ನ ಕುಡಿಕೆ,
ಮುನ್ನುಗ್ಗಿ ಬಾ ಮಗಳೇ,
ನಿನ್ನ ಮುಂದೆ ಸುಂದರ ವನ
ನಿನ್ನ ನೆಲ ನಿನ್ನ ಜನ
ನಿನಗೆ ಹೃದಯಪೂರ್ವಕ ನಮನ
ಸುಧಾ ಪಾಟೀಲ ಬೆಳಗಾವಿ