Homeಕವನಆಧುನಿಕ ವಚನಗಳು

ಆಧುನಿಕ ವಚನಗಳು

Published on

ಬಡವರ ಹೊಟ್ಟೆಯ ಹೊಡೆದು
ದೇವರ ಹೆಸರಿನಲ್ಲಿ
ಅನ್ನದಾಸೋಹ ಮಾಡುತ್ತ
ಮೆರೆಯುವ ದುರುಳರ ಕಂಡು
ಕ್ಯಾಕರಿಸಿ ಉಗಿಯುವನು ನೋಡಾ
ನಮ್ಮ ಸಂಗಮನಾಥ ನಂದ ಶಿವಾ

“”””””””””””””””””””””””””
ಮನೆ ಬೆಳಗುವ
ನಂದಾ ದೀಪವ ಬಿಟ್ಟು
ಕೊಳ್ಳಿಯ ಬೆಳಕೇ
ಭೇಶ್ ಎನ್ನುತ್ತ
ಬೆಂಕಿಯ ಸಹವಾಸ ಮಾಡಿದೊಡೆ
ಬುಡ ಸುಡದೇ ಬಿಟ್ಟೀತೇ ನಂದ ಶಿವಾ
“”””””””””””””””””””””””””””””””””
ಲೋಕಾಯುಕ್ತರ ಕೈಗೆ ಸಿಕ್ಕು
ತಿಂದದ್ದು ಕುಡಿದದ್ದು ಗೊಜ್ಜಿದ್ದು
ಎಲ್ಲವನು ತೊಳೆಸಿಕೊಳ್ಳುವುದೇ
ತ್ರಿಕರಣ ಶುದ್ಧಿ ಎಂದ ನಂದಶಿವಾ
“””””””””””””””””””””””””””””””””””””””””””
ಶಿವಾನಂದ ಬೆಳಕೂಡ
ರಾಯಬಾಗ

Latest articles

More like this