Homeಕವನಕವನ : ಕಾಡಬೇಡ

ಕವನ : ಕಾಡಬೇಡ

Published on

ಕಾಡಬೇಡ

ಮನದ ಮೌನ ಸಿರಿಯ ಸೀಳಿ,
ಮತ್ತೆ ಮತ್ತೆ ನಿನ್ನದೇ ನೆನಪು,
ಮರೆಯಲೆತ್ನಿಸಿದಷ್ಟೂ
ಹತ್ತಿರ ಬಂದು,
ಕಾಡುತಿದೆ ಈ ಹಳೆಯ ಒಲವು.

ಹಗಲ ಬೆಳಕಲಿ ಮರೆಯಾಗುವ ಮುನ್ನ,
ಇರುಳ ಕತ್ತಲಲಿ
ಜೊತೆಯಾಗುವ ಮುನ್ನ,
ಕಣ್ಣ ರೆಪ್ಪೆಯ ಮರೆಯಲ್ಲಿ ಕುಳಿತು,
ಕಣ್ಣೀರ ಹನಿಗಳಲಿ
ಕರಗುತ್ತಿದೆ ಒಲವು.

ಮಾತನಾಡದ ಮೌನದ
ಭಾವ ಭಾಷೆ ನೀನು,
ಮುಗಿಯದ ಕಾವ್ಯ ಸಾಲು ನೀನು,
ಎದೆಯ ಗೂಡಲಿ
ಅಚ್ಚಳಿಯದಂತೆ ಉಳಿದ,
ನೆನಪಿನ ಸುಂದರ ತೀರ ನೀನು.

ಕಾಡಬೇಡ ಸಾಕಿನ್ನು ನೆನಪೇ,
ಹೃದಯದ ಭಾರವ
ಹೊರಲಾರೆನು,
ನೀ ತಂದ ಆ ದಿನಗಳ
ಸವಿಯನು,
ಇನ್ನೊಮ್ಮೆ ನಾ ಮರಳಿ
ಪಡೆಯಲಾರೆನು.
ಸಾಕಿನ್ನು ಕನಸುಗಳೇ
ಕಾಡ ಬೇಡಿ
ನನಗೀಗ ನನ್ನ
ಅಮರ ಪ್ರೀತಿ ಸಿಕ್ಕಿದೆ.
______________________

ಕಾವೇರಿ ಪಾಟೀಲ ಶಹಾಪುರ

Latest articles

More like this