Homeಸುದ್ದಿಗಳುಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ  ಪ್ರಗತಿಪರ ರೈತರಿಗೆ ಅನ್ನದಾತ ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ  ಪ್ರಗತಿಪರ ರೈತರಿಗೆ ಅನ್ನದಾತ ಪ್ರಶಸ್ತಿ

Published on

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಬೆಂಗಳೂರು ಜಿಲ್ಲೆ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಬೆಂಗಳೂರು ಯಶವಂತಪುರ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನವೆಂಬರ್ ೧೫ರಂದು ನಡೆದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಗತಿಪರ ರೈತರಿಗೆ ಅನ್ನದಾತ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾ. ಭುವನಹಳ್ಳಿ ಗ್ರಾಮದ ಬಿ.ಎಸ್.ಚಂದ್ರಕುಮಾರ್, ಹಾಸನದ ಶ್ರೀಮತಿ ಹೇಮ ಅನಂತರಾಜು, ಹೊಳೆನರಸೀಪುರ ತಾ. ರಾಮೇನಹಳ್ಳಿಯ ಆರ್.ಕೆ.ಪುಟ್ಟಸ್ವಾಮಿಗೌಡ, ಆಲೂರು ತಾ. ಪಟ್ನ ಗ್ರಾಮದ ವೆಂಕಟೇಗೌಡರು, ಕಲಬುರಗಿ ಜಿಲ್ಲೆ ಅಫಜಲಪುರ ಮತಕ್ಷೇತ್ರದ ಖಣದಾಳ ಗ್ರಾಮದ ರಮೇಶ ನಟಿಕಾರ, ಮಂಡ್ಯ ತಾ. ಜಯಪುರ ಗ್ರಾಮದ ಜೆ.ಕೆ.ಬಸವರಾಜು, ಪಿ.ಎಂ.ಗುರುರಾಜ, ಎಸ್.ಮನೋಹರ ಮತ್ತು ಸಿ.ಕೆ.ತಿಪ್ಪೇಸ್ವಾಮಿ ಇವರಿಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಡಾ.ಸಿ.ಸೋಮಶೇಖರ್ ಅನ್ನದಾತ ಪ್ರಶಸ್ತಿ ಪತ್ರ ಫಲಕ ನೀಡಿ ಸನ್ಮಾನಿಸಿ ಪುರಸ್ಕರಿಸಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ, ಗೌರವಾಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ಚಿಕ್ಕಮಗಳೂರು, ಬೆಂಗಳೂರು ಘಟಕ ಜಿಲ್ಲಾಧ್ಯಕ್ಷರು ಆನಂದಕುಮಾರ್ ಯಾದವ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಚಂದ್ರಶೇಖರ ಹಡಪದ, ತುಮಕೂರು ಜಿಲ್ಲಾಧ್ಯಕ್ಷರು ಹನುಂತೋಜಿರಾವ್, ರಾಜ್ಯ ಸಹ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ ಸನ್ಮಾನದಲ್ಲಿ ಭಾಗಿಯಾಗಿದ್ದರು.

Latest articles

More like this