ಹೆಣ್ಣಲ್ಲ ನೀನು ಮಾತೆ
ಎಷ್ಟು ಜನುಮ
ಹೊತ್ತು ಬರಲಿ
ನಿನ್ನ ಋಣವ
ತೀರಿಸಲು
ಹೆತ್ತು ಹೊತ್ತು
ತಾಯಿಯಾದೆ
ಕೈಯ ಹಿಡಿದು
ಮಡದಿಯಾದೆ
ಪ್ರೀತಿ ಮಮತೆಯ
ಮುದ್ದು ಮಗಳು
ಸ್ನೇಹ ಒಲವಿನ
ಗೆಳತಿಯಾದೆ
ಅಕ್ಕರೆಯ ಅಕ್ಕ ನೀನು
ಕಾಡಿಸುವ ತಂಗಿ
ಕರುಣೆ ತೋರುವ
ಅಜ್ಜಿಯಾದೆ
ಬಿದ್ದಾಗ ನನ್ನನು
ಎತ್ತಿ ಹಿಡಿದಿರಿ ನೀವು
ಸೋತಾಗ ಬೆನ್ನು ತಟ್ಟಿ
ಗೆಲುವು ತಂದು ಕೊಟ್ಟಿರಿ
ಹೇಗೆ ತೀರಿಸಲಿ?
ನಿಮ್ಮ ಋಣವ
ತಾಯಿ ಅಕ್ಕ ಮಮತೆ
ಹೆಣ್ಣಲ್ಲ ನೀನು ಮಾತೆ
_____________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ*