Homeಕವನಕವನ : ಯುದ್ಧ ನಿಲ್ಲಲಿ

ಕವನ : ಯುದ್ಧ ನಿಲ್ಲಲಿ

Published on

ಯುದ್ಧ ನಿಲ್ಲಲಿ

ಯುದ್ಧ ನಿಲ್ಲಲಿ
ಕ್ರೌರ್ಯ ನಿಲ್ಲಲಿ
ರಕ್ತದೋಕುಳಿ ನಿಲ್ಲಲಿ
ಮುಗ್ಧ ಹಸುಳೆಯ
ಜೀವ ತರುಲತೆ
ಮರಣ ಶಾಸನ ನಿಲ್ಲಲಿ
ದೇಶ ದೇಶದ.
ದ್ವೇಷ ಮತ್ಸರ ಕರಗಿ
ಶಾಂತಿ ಪ್ರೀತಿ ನೆಲೆಸಲಿ
ಬೇಡ ನಮಗೆ
ಕದನ ಸಮರ
ಸಾವು ನೋವಿನ
ವೇದನೆ
ಕ್ಷಿಪಣಿ ಬಾಂಬು
ಗುಂಡು ಮದ್ದು
ಅಳವು ಬಳಲಿಕೆ
ಯಾತನೆ
ಮನುಜ ಕುಲಕೆ
ಶಾಂತಿ ಪ್ರೀತಿ
ಬುದ್ಧ ಬಸವರ ಮಂತ್ರವು
ನಾನು ಬದುಕಿ
ನಾವು ಬಾಳಿ
ಮಮತೆ ಜಗವ ಬೆಳಗಲಿ
_______________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ

Latest articles

More like this