ಮತ್ತೆ ಅರಳಿತು
_______________
ಬಿಸಿಲು ಬೇಗೆ
ಬಿರುಕು ಭೂಮಿ
ಮೋಡ ಬಿಚ್ಚಿದ
ಜಡಿ ಮಳೆ
ಕೋಪ ತಾಪ
ಮೌನ ಮುರಿದು
ಮತ್ತೆ ಅರಳಿತು
ಚಿಗುರೆಲೆ
ಮಾತು ಮರೆತ
ಭಾವ ವೇದನೆ
ಮತ್ತೆ ಹಾಡಿತು
ಕೋಗಿಲೆ
ಆಳುವು ನಗೆಯು
ನೋವು ನಲಿವು
ಹರುಷ ಸಂಭ್ರಮ
ಚಿತ್ಕಲೆ
ನೂರು ವರುಷ
ಇರಲಿ ಸಂತಸ
ಗೆದ್ದು ಬಿಡು
ಕೋಮಲೆ
______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ