Homeಕವನಕವನ : ನಕಲಿ ಡಾಕ್ಟರೇಟ್

ಕವನ : ನಕಲಿ ಡಾಕ್ಟರೇಟ್

Published on

ನಕಲಿ ಡಾಕ್ಟರೇಟ್

ಹಣಕ್ಕೊಂದು ಪದವಿ,
ಪ್ರತಿಷ್ಠೆಗೊಂದು ಪದವಿ!
ಓದಿಲ್ಲ , ಜ್ಞಾನವಿಲ್ಲ ,
ಕಿಸೆ ಕೈಯಲ್ಲಿ ಕಾಂಚಾಣ ಕೊರತೆಯಿಲ್ಲ
ಡಾಕ್ಟರೇಟ್ ಮನೆಗೆ ಬರುವುದ ಸತ್ಯ!

ಬೆವರು ಸುರಿಸುವ ಸಾಧಕರಿಗೆ
ಸಿಗದ ಮಾನ್ಯತೆ ಇಲ್ಲಿ,
ದುಡ್ಡು ಕೊಟ್ಟರೆ
ಬಿಕರಿಯಾಗುವ ನಕಲಿ ವಿವಿಗಳ
ಡಾಕ್ಟರೇಟ್ ಸಂತೆಯಲಿ

‘ಡಾಕ್ಟರ್’ ಎಂಬ ಹೆಸರಿನ ಹಪಾಹಪಿ
ಶೋಕಿ ನಕಲಿ ಸಾಧಕರಿಗೆ
ಸಮಾಜದ ಕಣ್ಣಿಗೆ ಮಣ್ಣೆರಚುವ ಹುಸಿ ಪ್ರತಿಷ್ಠೆಗೆ.
ಸಂಶೋಧನೆ ಬೇಡ, ಪ್ರಬಂಧವೂ ಇಲ್ಲ,
ಲಕ್ಷ ಸುರಿದರೆ ಡಾಕ್ಟರೇಟ್ ಪದವಿ ಶಾಲು !

ಘಟಿಕೋತ್ಸವದ ಹೆಸರಲ್ಲಿ ನಕಲಿ ಹಂಗಾಮು,
ಗೌರವ ಪದವಿಯ ಘನತೆಗೇ ಇಲ್ಲ ಲಗಾಮು
ಸಾಧಕರ ಬೆಲೆ ತಗ್ಗಿಸುವ ವ್ಯಾಪಾರ,
ಸಮಾಜದ ಜ್ಞಾನ ಸಂಸ್ಕೃತಿಗೆ
ಅಂಟಿದ ಕಂಟಕ ಕಳಂಕದ ಸಾರ!

ನಕಲಿ ಪದವಿಯ ಪಡೆದು
ಬೀಗುವ ಮಂದಿಯೇ ಕೇಳಿ,
ರದ್ದಿ ಕಾಗದದ ಮೇಲೆ ನಿಮ್ಮ
ಹೆಸರು ಬರೆಯುವ ಸಾಧನೆ
ಕುರುಡರ ಕಚೇರಿ ಮೂಕರ ಮೆರವಣಿಗೆ

ನಿಜವಾದ ಗೌರವವಿರುವುದು
ಜನರ ಪ್ರೀತಿ-ಹೃದಯದಲ್ಲಿ,
ಹಣ ಕೊಟ್ಟು ತಂದ ಈ
ಸರ್ಟಿಫಿಕೇಟಿನ ಚೂರುಗಳಲ್ಲಿ ಅಲ್ಲ!
ನಕಲಿ ಡಾಕ್ಟರೇಟ್ ಪದವಿಯಲ್ಲ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this