Homeಕವನಕವನ : ಮಣ್ಣಿನೊಳಗಿನ ಮೌನ

ಕವನ : ಮಣ್ಣಿನೊಳಗಿನ ಮೌನ

Published on

ಮಣ್ಣಿನೊಳಗಿನ ಮೌನ

ಕಣ್ಣಿಗೆ ಕಾಣದ ಮಣ್ಣಿನ ಪದರದಲಿ
ಅಡಗಿದೆ ದಿವ್ಯ ಮೌನ,
ಬಿತ್ತಿದ ಬೀಜದ ಒಡಲಲಿ ಅಡಗಿದೆ
ಮತ್ತೊಂದು ಜೀವ ಧ್ಯಾನ.

ತುಳಿವ ಪಾದವ ಸಹಿಸುತ ಕುಳಿತು
ನೋವನು ನುಂಗಿದ ನೆಲವು,
ಸಿಗುವ ಅಲ್ಪ ಹನಿಯನು ಹಂಚಿ
ನೀಡುತಿದೆ ನಗುತಲೊಲವು.

ಕೊಳೆಯುವ ಎಲೆಗಳ ಮೌನವೇ
ಹಸಿರನು ಬರಿಸುವ ಗೊಬ್ಬರ,
ಮಣ್ಣಿನ ಅನಂತ ಮೌನವೇ
ಶಕ್ತಿ ಧರೆಗೆ ಪಾವನ

ನಿಲ್ಲಲು ಬದುಕಿನ ಗೋಪುರ.
ಮಾತಿಲ್ಲದೆ ಮೌನದಿ ಸಾಗುವ ಕೃಷಿ
ಮಣ್ಣಿನ ಮೌನವ ಅರಿತರೆ ಬದುಕು
ಸುಂದರ, ನಿತ್ಯ ನೂತನ.
________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this