(ಎಲ್ಲ ವಿಟಮಿನ್ ಗಳ ಪರಿಚಯಾತ್ಮಕ ಮಕ್ಕಳ ಕವನ…)
ಎಚ್ಚರ ಬಲು ಎಚ್ಚರ
ಎಚ್ಚರ ಬಲು ಎಚ್ಚರ
ರೋಗ ರುಜಿನದಿ ಬಲು ಎಚ್ಚರ
ಅಲ್ಸರ್,ಕ್ಯಾನ್ಸರ್,
ಹೃದಯಾಘಾತ
ಸುಂದರ ಬದುಕಿಗೆ ಬಲು ಆಘಾತ
ಫಾಸ್ಟ್ ಫುಡ್,ಪ್ಲಾಸ್ಟಿಕ್ ಬಳಕೆ
ಗುಟಖಾ,ತಂಬಾಕು ಮದ್ಯಪಾನ
ಬಿಡುವುದು ಒಳಿತು ನೀ ತಿಳಿ ಮನುಜ..
ನಿತ್ಯ ವ್ಯಾಯಾಮ ಮಾಡಲೇಬೇಕು
ಹಸಿರು ತರಕಾರಿ ಸೇವಿಸಬೇಕು
ವೈದ್ಯರ ಭೇಟಿ ನಿಯಮಿತವಿರಲಿ
ಅವರ ಸಲಹೆಗಳ ಪಾಲನೆಯಿರಲಿ…
ಕ್ಯಾರೆಟ್ ಪಪಾಯಿ
ಹಸಿರು ತರಕಾರಿ
A ವಿಟಮಿನ್ ಗೆ ಮೂಲಾಧಾರಿ
ಕಣ್ಣಿನ ಆರೋಗ್ಯ ಉತ್ತಮ ಮಾರ್ಗ
ದಿನವೂ ತಿನ್ನಲು ಒಳ್ಳೆಯ ದೃಷ್ಟಿ.
ಮೊಟ್ಟೆ,ಹಾಲು, ಮಾಂಸಾಹಾರ
ಚುರುಕಾಗುವುದು ದೇಹದ ನರ ನರ
B ವಿಟಮಿನ್ ಸಮೃದ್ಧಿ ಹೇರಳ
ದಿನವೂ ತಿನ್ನಲು ಉತ್ತಮ ಶಕ್ತಿ.
ನಿಂಬೆ,ಕಿತ್ತಳೆ,ನೆಲ್ಲಿಕಾಯಿ
C ವಿಟಮಿನ ಗೆ ಇದುವೇ ತಾಯಿ
ರೋಗ ನಿರೋಧಕತೆ ಹೆಚ್ಚುವುದು
ಸದೃಢ ಶರೀರ ನಿನದಾಗುವುದು
ಹೂ ಬಿಸಿಲು,ಚೆಂದದ ಮೀನು
ಮೂಳೆ ಗಟ್ಟಿತನ,D ವಿಟಮಿನ್
ಸದೃಢ ದೇಹ,ಸದೃಢ ಮನಸು
ನನಸದು ನೋಡು ನಿನ್ನಯ ಕನಸು
ವೈದ್ಯೋ ನಾರಾಯಣ ವೈದ್ಯರೇ ಪ್ರಾಣ
ದೇವರ ರೂಪ,ಕರುಣೆಯ ದೀಪ
ನಿಯಮಿತವಿರಲಿ ವೈದ್ಯರ ಭೇಟಿ
ಅವರ ಸೇವೆಗೆ ಯಾರಿಲ್ಲ ಸಾಟಿ
ದುಡ್ಡು- ಕಾಸು,ಆಸ್ತಿ- ಪಾಸ್ತಿ
ಎಲ್ಲವೂ ಮಿಥ್ಯ ಮಿಥ್ಯ
HEALTH IS WEALTH
ಎನ್ನುವ ನುಡಿಯದು
ಎಂದಿಗೂ ಸತ್ಯ ಸತ್ಯ
ಶ್ರೀಮತಿ ಮೀನಾಕ್ಷಿ ಸೂಡಿ
ಲೇಖಕಿ,ದೇವಗಾಂವ್
ಚನ್ನಮ್ಮನ ಕಿತ್ತೂರು
ಬೆಳಗಾವಿ ಜಿಲ್ಲೆ
ಫೋನ್ 8073946046