ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ೪೨ನೇ ಸತ್ಸಂಗ ಸಮ್ಮೇಳನ ಇದೇ ಸೆ.೧೨ರಿಂದ ಸೆ.೧೬ರತನಕÀ ನಡೆದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ ೬ ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಿತು.
ಸೆ.೧೨ ರಿಂದ ಸೆ.೧೬ರವರೆಗೆ ನಾಡಿನ ಹೆಸರಾಂತ ಮಹಾತ್ಮರು, ಮಹಾಸ್ವಾಮೀಜಿ, ಸಂತ, ಶರಣರು, ಹರ, ಗುರು, ಚರಮೂರ್ತಿಗಳಿಂದ ವಿವಿಧ ವಿಷಯಗಳ ಮೇಲೆ ಪ್ರವಚನ ನಡೆಯಿತು. ಸೆ.೧೫ರಂದು ಪ್ರಾತಃಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ ಬಳಿಕ ರಾತ್ರಿ ೮ ಗಂಟೆಗೆ ಇಂಚಲದ ಸಾಧು ಸಂಸ್ಥಾನಮಠದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಘನ ಅಧ್ಯಕ್ಷತೆಯಲ್ಲಿ ಪ್ರವಚನ ನಡೆದ ಬಳಿಕ ಕರಿಕಟ್ಟಿ ಗುರುನಾಥ ಶಾಸ್ತಿಗಳಿಂದ ಕೀರ್ತನೆ, ಸ್ಥಳೀಯ ಶರಣ ಅಡಿವೆಪ್ಪ ಜೋಗಿ ಹಾಗೂ ಕುಟುಂಬದವರಿಂದ ಮತ್ತು ಅಕ್ಕಿಸಾಗರದ ಮಲ್ಲಪ್ಪ ತಡಸಿ ಹಾಗೂ ಕುಟುಂಬದವರಿAದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕಿರೀಟ ಮಹಾಪೂಜೆ ಸಡಗರದಿಂದ ಜರುಗಿತು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಕಲ್ಲೋಳಿ ಕುಮಾರಿ ವೀಣಾ ಮಂಟೂರ ಹಾಗೂ ಸಂಗಡಿಗರಿಂದ ಸಂಗೀತ ಸೇವೆ, ಶರಣ ಯಲ್ಲಪ್ಪ ಮೇಳೆನ್ನವರ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಕುಟುಂಬದವರಿಂದ ಮಹಾಪ್ರಸಾದ ಸೇವೆ, ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಂಡಿತು.
ಸೆ.೧೬ ರಂದು ಸತ್ಸಂಗ ಸಮ್ಮೇಳನ ಸಮಾರೂಪ ಸಮಾರಂಭದ ಸಾನಿಧ್ಯವನ್ನು ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ)ವಹಿಸಿ ಆರ್ಶೀವಚನ ನೀಡಿದರು. ಮಲ್ಲಾಪೂರ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಜೋಡಕುರುಳಿ ಚಿದ್ಘನಾನಂದ ಭಾರತಿ ಸ್ವಾಮೀಜಿ, ಗದಗದ ಶರಣೆ ಮೈತ್ರಾ ತಾಯಿಯವÀರು ಸಮಾರೂಪ ಸಮಾರಂಭದ ಸಮ್ಮುಖ ವಹಿಸಿ ಪ್ರವಚನ ನೀಡಿದರು. ಕರಿಕಟ್ಟಿ ಗುರುನಾಥ ಶಾಸ್ತಿಗಳಿಂದ ಕೀರ್ತನೆ ಜರುಗಿತು.
ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಈರಪ್ಪ ದೇಯಣ್ಣವರ, ಈಡಪ್ಪ ರಾಮಗೇರಿ, ಗೌಡಪ್ಪ ಮೇಳೆಣ್ಣವರ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ಸಿದ್ರಾಮ ಪಡಶೆಟ್ಟಿ, ಫಕೀರಪ್ಪ ಪೇದನ್ನವರ, ಬಸವರಾಜ ನೀಲಣ್ಣವರ, ಈರಪ್ಪ ಮಾಡಲಗಿ, ಶಿವನಗೌಡ ದೇಯಣ್ಣವರ, ಬಸನಗೌಡ ದೇಯಣ್ಣವರ, ಭೀಮನಾಯ್ಕ ನಾಯ್ಕರ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂತ-ಶರಣರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು,ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಮತ್ತೀತರರು ಇದ್ದರು. ಬಸವರಾಜ ಪಣದಿ ಕಾರ್ಯಕ್ರಮ ರೂಪಿಸಿ ಕೊನೆಗೆ ವಂದಿಸಿದರು.
ಪೋಟೊ : ಮಲ್ಲಾಪೂರ(ಕೆ.ಎನ್)ದ ಚಿದಾನಂದ ಸ್ವಾಮಿಜಿ ಅವರು ದಾನಿಗಳು, ವಿವಿಧ ವಲಯದ ಸಾಧಕರನ್ನು ಸತ್ಕರಿಸುತ್ತಿರುವುದು.
ವರದಿ : ಅಡಿವೇಶ ಮುಧೋಳ