Homeಕವನಕವನ : ನಂಜಿನ ಹೊರತಾಗಿ

ಕವನ : ನಂಜಿನ ಹೊರತಾಗಿ

Published on

ನಂಜಿನ ಹೊರತಾಗಿ


ಪ್ರೀತಿಯಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ದ್ವೇಷದ ಕಾವಿನ ಹೊರತಾಗಿ
ಹೂವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಚುಚ್ಚುವ ಮುಳ್ಳಿನ ಹೊರತಾಗಿ

ನಗುವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕೊರೆವ ಅಳುವಿನ ಹೊರತಾಗಿ
ನಲಿವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಸುಡುವ ನೋವಿನ ಹೊರತಾಗಿ

ಬೆಳಕಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕತ್ತಲ ತಾವಿನ ಹೊರತಾಗಿ
ನಂಬಿಕೆಯಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಮೋಸದ ಸಾವಿನ ಹೊರತಾಗಿ

ಜೇನಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕಹಿ ಬೇವಿನ ಹೊರತಾಗಿ
ಅಮೃತವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಉರಿವ ನಂಜಿನ ಹೊರತಾಗಿ

ಬೆಳದಿಂಗಳಾಗುವೆ ಎಂದ ಶಶಿ ಬೇರೇನೂ ಕೊಡಲಿಲ್ಲ ಕಾರಿರುಳ ಕಾನನ ಹೊರತಾಗಿ
ಇಂದುವಿನ ಭರವಸೆಯಾಗುವೆ ಎಂದ ಶಶಿ ಬೇರೇನೂ ಕೊಡಲಿಲ್ಲ ಶೋಕ ಗಾಯನ ಹೊರತಾಗಿ

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest articles

More like this