ಗೋಮಾತೆ
ಒಡಲ ಹಸಿವು ಹಾಲು ಕೊಟ್ಟು ನೀಗುವಳು
ಮನದ ನೋವಿಗೆ ಅಂಬಾ ಎನ್ನುತ ಪ್ರೀತಿಯಿಂದ ಕರೆಯುವಳು ಗೋಮಾತೆ
ಭಾರತೀಯ ಗೋಮಾತೆಗೆ
ನಿಮ್ಮ ಮನೆಯಲ್ಲಿ ಆಶ್ರಯ ನೀಡಿ
ಪೋಷಿಸಿ ಬೆಳೆಸಿ ನಿಮಗದು
ಆಶ್ರಯ ನೀಡುವುದು ಖಂಡಿತ
ತಾಯಿಯ ಹಾಲಿಗಿಂತ ಶ್ರೇಷ್ಠ
ಗೋಮಾತೆಯ ಹಾಲು
ತಾಯಿಗೆ ನೀಡುವ ಪ್ರೀತಿ ನೀಡಿ ಗೋಮಾತೆಗೆ
ನಾವು ನಂಬಿದ ದೇವರು
ಇಹರು ಗೋಮಾತೆಯೊಳು
ಎಲ್ಲಾ ಅಶುಭಗಳು ದೂರವಿಗುವವು
ಮನೆಯಲ್ಲಿ ಗೋಮಾತೆ ಇದ್ದರೆ
ಮುಖದಲ್ಲಿ ಬ್ರಹ್ಮ ಕಣ್ಣಿನೊಳು ವಿಷ್ಣು
ಕಂಠದೊಳು ರುದ್ರನ ಕಾಣುವೆವು ಗೋಮಾತೆಯೊಳು
ಗೋಮಾತೆ ಪ್ರೀತಿ ಸತ್ಯ
ನಿತ್ಯ ಅನಂತಾನಂತ
ಗೋರಕ್ಷೆಯಲಿ ನಿತ್ಯ ತೊಡಗಿ.
ಸಮಾಜದೊಳು ನೆಲೆಸುವುದು ಶಾಂತಿ
ತಡೆಯಿರಿ ಗೋಹತ್ಯೆ
ಸಗಣಿ ತಟ್ಟಲು
ಬೆರಣಿಯಾಗಿರುವೆ
ಸುಟ್ಟರೆ ವಿಭೂತಿಯಾಗಿರುವೆ
ಪುಣ್ಯ ಕೋಟಿ
ಕಲಿಯುಗ ಕಾಮಧೇನು
ಗೋಮಾತೆ
ಧರಣಿ ಮಂಡಲ ಮಧ್ಯದೊಳಗೆ
ಮತ್ತೆ ನೆಲೆಸಲಿ ಕಲಿಯುಗದ
ಕಾಮಧೇನು
ಗೋಹತ್ಯೆ ಕಟುಕ್ರೌರ್ಯ
ಉಳಿಸಿ ಬೆಳೆಸಿ ನೀವು
ಬೆಳೆಯಿರಿ ಗೋಮಾತೆ ರಕ್ಷಿಸುತಲಿ
ಶ್ರೀಮತಿ ಲಲಿತಾ ಪ್ರಶಾಂತಸಿಂಗ್ ಟೋಪಣ್ಣವರ
ಶರೇವಾಡ.
ತಾಲೂಕು ಮತ್ತು ಜಿಲ್ಲೆ ಧಾರವಾಡ