Homeಕವನಕವನ : ಭಾವಬುತ್ತಿ

ಕವನ : ಭಾವಬುತ್ತಿ

Published on

ಭಾವ ಬುತ್ತಿ
_________

ಆತ್ಮೀಯನಾಗ
ಬೇಕೆನ್ನುವುದು ಬಿಟ್ಟು
ಇರಲಿಲ್ಲ ಬೇರೆ ಆಸೆ
ಒಂಟಿ ಪಯಣಕೆ
ಕೊನೆ ಹೇಳಲು
ಬೆರಳ ಕೊಟ್ಟೆ
ಮುಳ್ಳು ತರಿದ ಮನಕೆ
ಮುಲಾಮು ಸವರಿದೆ
ಹುಟ್ಟು ಮರಣದ
ಲೆಕ್ಕ ಬಿಟ್ಟು
ಬದುಕು ತೋರಿದೆ
ಸತ್ಯ ಮಿಥ್ಯ
ಭ್ರಮೆ ಭ್ರಾಂತಿ
ಉಕ್ಕಿ ಹರಿಯುವ
ಉನ್ಮಾದ ತೊರೆದು
ಹಸಿರು ಕಾಡಿನ ಮಧ್ಯೆ
ಕೋಗಿಲೆಯ ಧ್ವನಿ
ಕೇಳುವ ತವಕ
ನೀನು ಸತ್ಯ ನಾನೂ ಸತ್ಯ
ಇಲ್ಲಿಲ್ಲ ನಮ್ಮ ಮಧ್ಯೆ ಮಿಥ್ಯ
ಹಸಿದಿರುವೆವು ನಾವು
ಉಣ್ಣೋಣ ಬಾ ಜೀವ
ಭಾವ ಬುತ್ತಿಯ ಬಿಚ್ಚಿ

            ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this