ಕೃತಕ ಜಗತ್ತಿನ ಕನ್ನಡಿ
ಬೆಳಗಿನ ಜಾವದ ಅಲಾರಾಂ ಸದ್ದು.
ನೆಮ್ಮದಿಯ ನಿದ್ದೆಯ ಕಣ್ಣನು ತೆರೆದು.
ಕೈಯಲಿ ಮೊಬೈಲ ಬಿಡದ ಕಣ್ಣಿನ ನೋಟ.
ಆರಂಭವಾಯಿತು ದಿನನಿತ್ಯದ ಬದುಕಿನ ಓಟ.
ಮೊಬೈಲಿನ ಪರದೆಯಲಿ ಮೆಸೇಜಿನ ಹೊನಲು.
ಮರೆತೇ ಹೋಯಿತು ಮನೆಯಂಗಳದ ನೆರಳು.
ಲೈಕು ಕಾಮೆಂಟುಗಳ ಕೃತಕ ಜಗತ್ತಿನ ಮಾಯೆ. ಆವರಿಸಿದೆ ಎಲ್ಲೆಡೆ ಡಿಜಿಟಲ್ ಮುಖದ ಛಾಯೆ.
ಸಿಮೆಂಟ್ ಕಾಂಕ್ರೀಟ್ ಗೋಡೆಗಳ ಮಧ್ಯೆ, ದಿನವೂ ಸಾಗುತಿದೆ ಬದುಕಿನ ದೊಡ್ಡ ಯುದ್ಧ.
ಮೆಟ್ರೋ ಬಸ್ಸಿನ ಆ ಸಾಲು ಸಾಲು ದಂಡು
ಮೆಷಿನ್ ತರಹ ಬದುಕುವ ಮನುಜರನು ಕಂಡು ಲ್ಯಾಪ್ಟಾಪ್ ಕೀಬೋರ್ಡ್ ಬೆರಳುಗಳ ನರ್ತನ, ಮರೆಯಾಗುತಿದೆ ಪ್ರಕೃತಿಯ ಸಹಜ ವರ್ತನ.
ಆನ್ಲೈನ್ ಆರ್ಡರ್ ತಿಂಡಿ ತಿನಿಸಿನ ಖುಷಿ, ದೂರವಾಗುತಿದೆ ತಾಯಿಯ ಕೈಯಡುಗೆಯ ರುಚಿ.
ಸಾಮಾಜಿಕ ಜಾಲತಾಣದ ಗೆಳೆಯರ ಸಂತೆ,ಹೃದಯದ ಒಳಗೆ ಹಂಚಿಕೊಳ್ಳಲು ಯಾರೂ ಇಲ್ಲದ ಚಿಂತೆ.
ಕೃತಕ ನಗುವಿನ ಇನ್ಸ್ಟಾಗ್ರಾಮ್ ರೀಲ್ಸಿನ ಲೋಕ,
ತೆರೆಯ ಮರೆಯಲ್ಲಿ ಯಾರಿಗೂ ತಿಳಿಯದ ಶೋಕ.
ಇಯರ್ಫೋನ್ ಹಾಡಿನ ನಾದದ ನಡುವೆ, ಕೇಳದಾಗಿದೆ ಪ್ರಕೃತಿಯ ಹಕ್ಕಿಗಳ ತೊಡುಗೆ. ಎಲ್ಲೋ ಓಡುತಿದೆ ಸಮಯದ ವೇಗದ ರೈಲು, ಕಳೆದುಹೋಗುತಿದೆ ಪ್ರಶಾಂತ ಹಳ್ಳಿಯ ಬಯಲು. ದುಡ್ಡಿನ ಬೆನ್ನೇರಿ ಸಾಗುತಿದೆ ಜಗತ್ತಿನ ಪಯಣ,ಬದಲಾಗುತಿದೆ ಪ್ರೀತಿಯ ಸ್ನೇಹದ ಲಕ್ಷಣ.
ನಿಲ್ಲಿಸು ಒಮ್ಮೆ ಈ ಕೃತಕ ಓಟದ ಜಾಗ, ಮನಸ್ಸಿಗೆ ಬೇಕಿದೆ ಪ್ರಕೃತಿಯ ಶಾಂತಿಯ ಯೋಗ. ರೆಕ್ಕೆ ಬಿಚ್ಚಿ ಹಾರಲಿ ಆಂತರಿಕ ಚೇತನದ ಹಕ್ಕಿ,ಆಗ ಮಾತ್ರ ಕಾಣುವುದು ಬದುಕಿನ ನೈಜ ಶಕ್ತಿ.
================================
ಜಯಶ್ರೀ ಜೆ ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ 944923414