ವ್ಯಥೆಯ ವಾರಿಧಿ
ಕೈಬಿಟ್ಟವರ ಹೃದಯ
ಬರಡು ಬೆಂಗಾಡು!
ಕಂಡ ಸಾಕ್ಷಿಗಳು
ಕಣ್ಣಿದ್ದೂ ಕುರುಡು!
ಕಣ್ಣಿದಿರಿಗೆ ಗ್ರಹಣ
ಭಾವಗಳ ತಲ್ಲಣ!
ಕ್ಷೋಭೆಯ ಆಗಮನ
ನೆಮ್ಮದಿಯ ನಿರ್ಗಮನ!
ವ್ಯಥೆಯ ವಾರಿಧಿಗೆ
ಕಣ್ಣೀರ ಹೊಳೆಯ ಸಂಧಾನ!
ಬಲವಿಲ್ಲದ ಬದುಕಿಗೆ
ಬಯಲೇ ಸಮಾಧಾನ!
ಬದುಕಿನ ಬತ್ತಳಿಕೆಯೊಳಗೆ
ನೂರಾರು ನೋವಿನ ಕತೆ!
ಮೌನ ಹೊದ್ದ ಭಾವಗಳೊಂದಿಗೆ
ನಡೆದಿದೆ ಮನದ ಮಾತುಕತೆ!
ಕಾವೇರಿ ಪಾಟೀಲ, ಶಿಕ್ಷಕರು ಶಹಾಪುರ(ತಾ)