ಕನಸುಗಳು
ನಾ ಕಂಡ ಕನಸುಗಳು
ಮಾಯವಾದವು ಹಗಲು
ರಾತ್ರಿಯಿಡಿ ಭಾವಗಳ
ಬೀಜ ಬಿತ್ತಿ
ಹಲವು ದಿನಗಳ ಬಯಕೆ
ಭರವಸೆಯ ಮೂಡಿಸಿ
ಬಿರು ಗಾಳಿಯಲಿ ಎಲ್ಲೋ
ಮಾಯವಾಗಿ
ಮೊಳಕೆಯೊಡೆಯುತಲೇ
ಚಿಗುರು ಕಮರಿತು ಬಾಡಿ
ಹಸಿರು ಕಳೆಗಳ ಮಧ್ಯೆ
ಸ್ಪೂರ್ತಿ ಮಳೆ ಇಲ್ಲದೆ
ಸ್ನೇಹದ ಅರಮನೆ
ಹೃದಯದ ಹೂದೋಟ
ಒಣಗಿದವು ಗುಲಾಬಿ
ವಿರಹ ಬೇಗೆ
ಪ್ರೀತಿಯ ಸಿಂಚರ
ಹೊಯ್ಯುವ ದಿನಕಾಗಿ
ನೆಟ್ಟಿರುವೆ ಕಣ್ಣುಗಳ
ಮುಗಿಲು ಮೋಡಗಳ ನಡುವೆ
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ