ಹೆಸರಿಟ್ಟರೆ
ಹೆಸರಿಟ್ಟರೆ
ಸೀಮಿತವಾಗುವ
ಕೆಲವು ಭಾವನೆಗಳಿವೆ….
ಅವುಗಳಲ್ಲಿ ನೀನು
ನನ್ನದಾಗಿರುವೆ
ನಿನ್ನನು ಪ್ರೀತಿ ಏನ್ನಲಾರೆ
ಸ್ನೇಹ ಎನ್ನಲಾರೆ..
ಏಕೆಂದರೆ ಆ ಎರಡೂ
ಪದಗಳಿಗೂ ನಿನ್ನಷ್ಟು
ಆಳವಿಲ್ಲ ಆಕಾರವಿಲ್ಲ
ನೀನು ನನ್ನ ಜಪದ
ಕೊನೆಯ ಉಸಿರು…..
ಮೌನದ ಮೊದಲ
ಪ್ರಾರ್ಥನೆ…..
ಹೇಳದ ನೋವಿನ
ಏಕೈಕ ಅರ್ಥ….
ನಮ್ಮಿಬ್ಬರ ನಡುವೆ
ಯಾವ ಮಾತುಗಳ
ಒಪ್ಪಂದವಿಲ್ಲ…
ಯಾವ ಸಂಬಂಧದ
ಹೆಸರೂ ಇಲ್ಲ…..
ಇದ್ದದ್ದು ಒಂದೇ—
ಒಬ್ಬರ ಆತ್ಮದಲ್ಲಿ
ಮತ್ತೊಬ್ಬರು ಮೌನವಾಗಿ
ನೆಲೆಸಿರುವ ಸತ್ಯ…..
ಮೌನದಲ್ಲಿ ಮೆಲ್ಲಗಿದ್ದು
ಯಾರಿಲ್ಲದ ಹಾದಿಯಲ್ಲಿ
ಎದ್ದು ಹೋಗುವುದೇ
ಜೀವನ
ಮೌನ ಗೆಲ್ಲಲಿ
ಮಾತು ಸೋತು
ಮೌನ ಗೆಲ್ಲಲಿ
ನನ್ನ ನಿನ್ನ
ಸ್ನೇಹ ಪ್ರೀತಿಯು
ನಿನ್ನ ನೆನಪು
ಭಾವ ಬದುಕು
ನಮ್ಮ ಪಯಣ
ಜೀವ ಸೆಲೆಯು
ನೋಡಿ ನಕ್ಕೆವು
ದುಃಖ ಮರೆತು.
ಒಲವು ಚೆಲುವು
ನಮ್ಮ ಆಸ್ತಿಯು
ಗಾಳಿ ಬೀಸಿ
ಮೋಡ ಕರಗಿ
ಮಮತೆ ಮಳೆಯು
ಹೊಡೆಯಲಿ
ಶಾಂತಿ ಪ್ರೀತಿ ಹರಡಲಿ
______________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ